ಚಿಕ್ಕಮಗಳೂರು : ಕಾಂಗ್ರೆಸ್ ಮುಖಂಡ ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಲೆಮರೆಸಿಕೊಂಡಿದ್ದ 6 ಮಂದಿ ಆರೋಪಿಗಳನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಎ2 ನಿತಿನ್, ಎ4 ದರ್ಶನ್, ಎ5 ಅಜಯ್ ಸೇರಿದಂತೆ ದರ್ಶನ್ ನಾಯ್ಕ್, ಯೋಗೇಶ್, ಫೈಸಲ್ ಎಂದು ಗುರುತಿಸಲಾಗಿದೆ. ಡಿ.5ರ ರಾತ್ರಿ ಸಖರಾಯಪಟ್ಟಣದಲ್ಲಿ ಗಣೇಶ್ ಹತ್ಯೆ ನಡೆದಿತ್ತು. ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಗಣೇಶ್ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೂ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಎ1 ಸಂಜಯ್ ಎ3 ನಾಗಭೂಷಣ್, ಎ6 ಮಿಥುನ್ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಈ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ. ಕಾಂಗ್ರೆಸ್ ನಾಯಕರು ಹತ್ಯೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತನಿಖೆಯು ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಹತ್ಯೆಯ ಹಿಂದಿನ ಮೂಲ ಕಾರಣಗಳು ಇನ್ನೂ ಸಂಪೂರ್ಣ ಬಯಲಾಗಿಲ್ಲ.
ಇದನ್ನೂ ಓದಿ : ದೇವನಹಳ್ಳಿ ಬಳಿ ಭೀಕರ ಕಾರು ಅಪಘಾತ | ಮೂವರು ಸ್ಥಳದಲ್ಲೇ ಸಾವು


















