ʻರಾಕಿಂಗ್ ಸ್ಟಾರ್ʼ ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಅವರ ಮುಂದಿನ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ʼ ಮೇಲಿದೆ. ಈ ಚಿತ್ರದ ಮೂಲಕ ನಾಲ್ಕು ವರ್ಷಗಳ ನಂತರ ಯಶ್ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಸದ್ಯ ಟಾಕ್ಸಿಕ್ ರಿಲೀಸ್‌ಗೆ 100 ದಿನಗಳು ಬಾಕಿ ಇವೆ. ಈ ಚಿತ್ರವು ಮುಂದಿನ ವರ್ಷ ಮಾರ್ಚ್ 19ರಂದು ತೆರೆಗೆ ಬರಲಿದೆ. ಸದ್ಯ ಈ ಚಿತ್ರದ ಬಗ್ಗೆ ಒಂದಷ್ಟು ಅಪ್ಡೇಟ್ ಅನ್ನು ಚಿತ್ರತಂಡ ಹಂಚಿಕೊಂಡಿದೆ.
‘ಟಾಕ್ಸಿಕ್’ ಸಿನಿಮಾದ ಹೊಸ ಪೋಸ್ಟರ್ ಅನ್ನು ನಟ ಯಶ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ವ್ಯಕ್ತಿಯೊಬ್ಬ (ಬಹುಷಃ ಯಶ್) ಬಾತ್ಟಬ್ನಲ್ಲಿ ಕೂತಿದ್ದಾನೆ, ಆ ಬಾತ್ ಟಬ್ನ ಅಂಚುಗಳಲ್ಲಿ ರಕ್ತ ಹರಿಯುತ್ತಿದೆ. ಆ ವ್ಯಕ್ತಿ ರಕ್ತ ತುಂಬಿದ ಬಾತ್ಟಬ್ನಲ್ಲಿ ಕೂತಿದ್ದಾನೆ ಎಂಬುದನ್ನು ಚಿತ್ರ ಹೇಳುತ್ತಿದೆ. ಪೋಸ್ಟರ್ ಮೂಲಕ ಯಶ್ ಪಾತ್ರ ‘ಟಾಕ್ಸಿಕ್’ ಸಿನಿಮಾನಲ್ಲಿ ಅತ್ಯಂತ ವಯಲೆಂಟ್ ಪಾತ್ರ ಆಗಿರಲಿದೆ ಎಂಬುದನ್ನು ಸೂಚ್ಯವಾಗಿ ಹೇಳಲಾಗುತ್ತಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಯಶ್ ಮುಖ ತೋರಿಸಲಾಗಿಲ್ಲ.
ಪೋಸ್ಟರ್ ಹಂಚಿಕೊಂಡಿರುವ ನಟ ಯಶ್, ‘ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಪೋಸ್ಟರ್ನಲ್ಲಿಯೂ ಸಹ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನಗಳಷ್ಟೆ ಬಾಕಿ ಇದೆ ಎಂದು ಹೇಳಲಾಗಿದೆ. ಬಿಡುಗಡೆ ಆಗಿರುವ ಪೋಸ್ಟರ್ ಆಸಕ್ತಿಕರವಾಗಿದ್ದು, ಹಾಲಿವುಡ್ ಸಿನಿಮಾಗಳ ಫೀಲ್ ನೀಡುತ್ತಿದೆ. ಯಶ್ ಬೆನ್ನಮೇಲಿನ ಟ್ಯಾಟೂ ಸಹ ಗಮನ ಸೆಳೆಯುತ್ತಿದೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸ್ವತಃ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಇದು ಕರ್ನಾಟಕದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ : ತೆಲಂಗಾಣ | ಮಗನ ಶಾಲೆಯ ಎದುರೇ ತಂದೆಯ ಬರ್ಬರ ಹತ್ಯೆ!



















