ಹಾವೇರಿ : ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಗುಡ್ಡದ ಸಮೀಪದ ರೈತರ ಜಮೀನಿನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಚಿರತೆ ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಚಿರತೆ ಭಯದಿಂದ ಜನರು ಕೃಷಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ತೋಟದ ಮನೆಯ ಸಿಸಿಟಿವಿಯಲ್ಲಿ ಚಿರತೆಯ ದೃಶ್ಯ ಸೆರೆಯಾಗಿತ್ತು. ಸದ್ಯ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಚಿರತೆ ಸೆರೆಯಿಂದ ಸುತ್ತಮುತ್ತಲಿನ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಜೈಷ್ ಉಗ್ರ ಸಂಘಟನೆಗೆ ‘ಮಹಿಳಾ ಪಡೆ’ ಸೇರ್ಪಡೆ | 500 ರೂ. ಶುಲ್ಕ, ಆನ್‌ಲೈನ್ ತರಬೇತಿ ; 5,000ಕ್ಕೂ ಹೆಚ್ಚು ಮಹಿಳೆಯರ ನೇಮಕ!



















