ದಾವಣಗೆರೆ : ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಡಿ ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ್ ವಿರುದ್ಧ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆದರ್ಶರಲ್ಲ. ಅವರು ಕ್ರೂರಿಗಳು’ ಎಂದು ಇತ್ತೀಚೆಗೆ ನಗರದ ಎವಿಕೆ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಬಿ.ಟಿ. ಲಲಿತಾ ನಾಯಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 299 (ಧಾರ್ಮಿಕ ಭಾವನೆಗೆ ಧಕ್ಕೆ), ಸೆಕ್ಷನ್ 353 (ಸಾರ್ವಜನಿಕವಾಗಿ ಅವಹೇಳನ) ಹಾಗೂ ಸೆಕ್ಷನ್ 352 (ಶಾಂತಿ ಕದಡಲು ಉದ್ದೇಶಪೂರ್ವ ಯತ್ನ) ಅಡಿಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ‘ದಿತ್ವಾ’ ಚಂಡಮಾರುತಕ್ಕೆ ನಲುಗಿದ ಶ್ರೀಲಂಕಾ.. 120ಕ್ಕೂ ಹೆಚ್ಚು ಮಂದಿ ಸಾವು | ನೆರವಿಗೆ ಧಾವಿಸಿದ ಭಾರತ



















