ಮಂಡ್ಯ: ಮಂಡ್ಯದ ಮದ್ದೂರಿನಲ್ಲಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಮಾಜಿ ಪುರಸಭಾ ಅಧ್ಯಕ್ಷನನ್ನು ಬಂಧಿಸಲಾಗಿದೆ.
ಮಾಜಿ ಪುರಸಭಾ ಅಧ್ಯಕ್ಷ ಎಂ.ಕೆ.ಮರೀಗೌಡ ಬಂಧಿತ ಆರೋಪಿ. ಕಳೆದ ಆಗಷ್ಟ 26 ರಂದು ಮದ್ದೂರಿನ ದೊಡ್ಡಿ ಬೀದಿಯ ಗ್ಯಾಸ್ ಚಂದ್ರು ಮನೆಗೆ ಮುಸುಕುಧಾರಿಯಾಗಿ ಬಂದು ಮನೆಯಲ್ಲಿದ್ದ ಚಂದ್ರು ಪತ್ನಿ ಸುಶೀಲಮ್ಮರನ್ನು ಬೆದರಿಸಿ ಚಿನ್ನಾಭರಣ ದರೋಡೆ ಮಾಡಲಾಗಿತ್ತು.
ಆ ದಿನ ಪ್ರಕರಣ ಕೈಗೊತ್ತಿಕೊಂಡ್ಡರು ಗಣೇಶನ ಗಲಭೆಯಿಂದ ವಿಳಂಬವಾಗಿತ್ತು. ಗಣೇಶನ ಗಲಭೆ ಬಳಿಕ ಈ ಕಳ್ಳತನದ ಬಗ್ಗೆ ಎಸ್ಪಿಯಿಂದ ವಿಶೇಷ ತಂಡ ರಚನೆ ಮಾಡಿ, ಅಂದಿನ ದಿನದ ಅಲ್ಲಿನ ಸಿಸಿಟಿವಿ ದೃಶ್ಯವನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು, ಕಳ್ಳತನ ಮಾಡಿದ್ದ 15 ಲಕ್ಷದ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ನೀಡಿದ್ದು, ಈ ಘಟನಾ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ 23 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ | ಆರೋಪಿ ಅರೆಸ್ಟ್



















