ಬೆಂಗಲೂರು : ಬೆಂಗಳೂರಿನಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣ ರಾಜ್ಯವನ್ನೇ ಅಲ್ಲೋಲ ಕಲ್ಲೋಲಗೊಳಿಸಿತ್ತು. ಪ್ರಕರಣದ ಕಿಂಗ್‌ಪಿನ್ ಆಗಿರುವ ಎಕ್ಸ್ ಎಕ್ಸೇವಿಯರ್ ಹಾಗೂ ಅಣ್ಣಪ್ಪ ನಾಯ್ಕ್ ಸೇರಿದಂತೆ ಐದುಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಆಂಧ್ರ ಹಾಗೂ ತಮಿಳುನಾಡಿನ ಗಡಿಭಾಗಗಳಲ್ಲಿ ಗಟ್ಟಿಯಾಗಿ ಶೋಧ ನಡೆಯುತ್ತಿದೆ.
ಮಾಹಿತಿಗಳ ಪ್ರಕಾರ, ರಿಕವರಿಯಾದ 5 ಕೋಟಿ 76 ಲಕ್ಷ ಹಣವನ್ನು ಸೂಟ್ ಕೇಸ್ ಜೊತೆ ಚೀಲ ಹಾಗೂ ಬಟ್ಟೆಯಲ್ಲಿ ದಕ್ಷಿಣ ವಿಭಾಗ ಪೊಲೀಸರು ಕಮಿಷನರ್ ಕಚೇರಿಗೆ ತಂದಿದ್ದಾರೆ.

ಘಟನೆ ದಿನವಾದ ನವೆಂಬರ್ 19ರಂದು ಅಶೋಕ್ ಪಿಲ್ಲರ್ ಬಳಿ ವ್ಯಾಗನರ್ ಕಾರು ಮೊದಲು ಕಾಣಿಸಿಕೊಂಡಿದ್ದು, ನಂಬರ್ ಪ್ಲೇಟ್ ಇಲ್ಲದ ವಾಹನ ಬಳಕೆ ಮಾಡಿದ್ದ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ. ಸಿಸಿ ಕ್ಯಾಮೆರಾ ಚಿತ್ರಣಗಳ ಮೂಲಕ 11.45ರ ವೇಳೆ ವ್ಯಾಗನರ್ ಕಾರು ಅಶೋಕ್ ಪಿಲ್ಲರ್ ರಸ್ತೆಗೆ ಬಂದು ಯು–ಟರ್ನ್ ಮಾಡಿ ಕೆಲವು ನಿಮಿಷಗಳು ಕಾದು ನಿಂತಿರುವುದು ದೃಢಪಟ್ಟಿದೆ.
ಹಣ ತುಂಬಿಕೊಂಡಿದ್ದ CMS ಕಂಪನಿಯ ವಾಹನ ಸ್ಥಳಕ್ಕೆ ಬರುವ ಮುನ್ನವೇ, ಇನೋವಾ ಕಾರ್ ಮತ್ತು ವ್ಯಾಗನರ್ ಕಾರ್ ಎರಡಕ್ಕೂ ಯೋಜನೆ ಪ್ರಕಾರ ಮುಂಚಿತವಾಗಿ ಅಡ್ಡ ಹಾಕಿ ವಾಹನವನ್ನು ನಿಲ್ಲಿಸಲಾಗಿತ್ತು. ವ್ಯಾಗನರ್‌ನಿಂದ ಇಳಿದ ದರೋಡೆಕೋರರು ಆರ್.ಬಿ.ಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ನಕಲಿ ಐಡಿ ಕಾರ್ಡುಗಳನ್ನು ತೋರಿಸಿ CMS ಸಿಬ್ಬಂದಿಗೆ ಬೆದರಿಕೆ ಹಾಕಿದ್ದರು. ರಾಬರ್ಸ್ CMS ಸಿಬ್ಬಂದಿಯನ್ನು ತಮ್ಮ ಕಾರಿಗೆ ಎಳೆದುಕೊಂಡು ಹೋಗಿ, ಇನೋವಾ ಮತ್ತು ವ್ಯಾಗನರ್ ಎರಡನ್ನೂ ಬಳಸಿ ಸ್ಥಳದಿಂದ ಪರಾರಿಯಾಗಿದ್ದರು. ನಂತರ ಕುಪ್ಪಂ ಹತ್ತಿರ ಇನೋವಾ ಕಾರನ್ನು ನಿಲ್ಲಿಸಿ, ಹಣವನ್ನು ಚೀಲಗಳಿಗೆ ತುಂಬಿಕೊಂಡು ವ್ಯಾಗನರ್‌ನಲ್ಲಿ ಪರಾರಿಯಾಗಿದ್ದಾರು.
ಇದನ್ನೂ ಓದಿ : ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ | 5ಕ್ಕೂ ಹೆಚ್ಚು ಆರೋಪಿಗಳ ಬಂಧನ.. ಈವರೆಗೂ ವಶಕ್ಕೆ ಪಡೆದ ಹಣವೆಷ್ಟು?



















