ದಾವಣಗೆರೆ : ಸಿದ್ದರಾಮಯ್ಯ ಬದಲಾವಣೆ ಸಾಧ್ಯವಿಲ್ಲ, ಡಿಕೆಶಿ ಸಿಎಂ ಆಗೋದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಚರ್ಚೆಯ ವಿಚಾರವಾಗಿ ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತ ಖರ್ಗೆ ನನ್ನ ಹೆಸರು ಯಾರೂ ಹೇಳ್ತಿಲ್ಲ ಅಂತಾ ಯೋಚನೆ ಮಾಡ್ತಾ ಇದ್ದಾರೆ. ಹೊಸ ಕಾರ್ಡ್ ಪ್ಲೇ ಆಗುತ್ತದೆ ನೋಡ್ತಿರಿ. ಸಿದ್ದರಾಮಯ್ಯ ಮುಂದುವರೆಯದಿದ್ದರೆ ಖರ್ಗೆ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಆತ್ಮೀಯ ಗೆಳೆಯ ಡಿಕೆಶಿ ಸಿಎಂ ಆಗಲ್ಲ, ಡಿಕೆಶಿ ಬಿಜೆಪಿಗೆ ಬಂದು ಸಿಎಂ ಆಗಿ ವಿಜಯೇಂದ್ರ ಡಿಸಿಎಂ ಆದ್ರೆ ಕರ್ನಾಟಕ ಉಳಿಯಲ್ಲ. ಗಾಳಿ, ನೀರು, ಗುಡ್ಡ, ಬೆಟ್ಟ ಬಂದ್ ಆಗುತ್ತವೆ. ಇವರನ್ನು ಕೇಳಿ ಉಸಿರಾಡಬೇಕಾಗುತ್ತದೆ. ಗಾಳಿ, ನೀರನ್ನು ಖರೀದಿ ಮಾಡಿಬಿಡ್ತಾರೆ. ಉಸಿರಾಡೋಕೂ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಭ್ರಷ್ಟಾಚಾರದಿಂದ ಗುಡ್ಡ, ಬೆಟ್ಟ ಉಳಿಯಲ್ಲ, ಈಗಾಗಲೇ ಕನಕಪುರ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ನಿತೀಶ್ ಅಂತಾ ಒಳ್ಳೆಯ ಲೀಡರ್. ಹೀಗಾಗಿ ಅಧಿಕಾರಕ್ಕೆ ಬಂದಿದೆ. ಬಿಹಾರದಲ್ಲಿ ಗೆದ್ದಿದ್ದೇವೆ, ಕರ್ನಾಟಕದಲ್ಲೂ ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ, ಆದ್ರೆ ಆಗಲ್ಲ. ಭ್ರಷ್ಟ ಯಡಿಯೂರಪ್ಪ ಕುಟುಂಬ ಇದ್ರೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ನಾನು ನಿತೀಶ್ ಕುಮಾರ್ ಆಗಲ್ಲ. ಯೋಗಿ ಆದಿತ್ಯನಾಥ್ ಆಗುತ್ತೇನೆ. ನಾನು AK 47 ಥರ, ವಿಜಯೇಂದ್ರ ಬದಲಾಗದಿದ್ದರೆ ಜೆಸಿಬಿ ಪಕ್ಷ ಕಟ್ತೀನಿ. ಹಿಂದೂಗಳ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ವಿಧಾನಸೌಧದ ಮುಂದೆ ನೇಪಾಳಿ ಗ್ಯಾಂಗ್ ಹೊಡೆದಾಟ ಕೇಸ್ | 11 ಆರೋಪಿಗಳ ಬಂಧನ!



















