ತುಮಕೂರು: ತುಮಕೂರು ನಗರದಲ್ಲಿ ಮತ್ತೆ ನೆತ್ತರಕೋಡಿ ಹರಿದಿದೆ. ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರ ಎನ್ನಲಾಗುತ್ತಿದೆ.
ಅಭಿ (28) ಅಲಿಯಸ್ ಟಿಬೆಟ್ ದಾಳಿಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಯುವಕ, ಮನೋಜ್ (32) ಅಲಿಯಸ್ ಪ್ಯಾಚ್ ಎಂಬ ರೌಡಿಶೀಟರ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಗುರುವಾರ ರಾತ್ರಿ 10.30ರ ಸುಮಾರಿನಲ್ಲಿ ತುಮಕೂರು ಔಟರ್ ರಿಂಗ್ ರಸ್ಥೆ, ಎಸ್ ಎಚ್ ಕೆ ಲಾಡ್ಜ್ ಹಿಂಬಾಗದಲ್ಲಿ ಇಬ್ಬರ ಮೇಲೆ ಲಾಂಗು ಮಚ್ಚುಗಳಿಂದ ದಾಳಿ ನಡೆದಿದೆ.
ತುಮಕೂರಿನ ಕ್ಯಾತಸಂದ್ರ ಮೂಲದ ಅಭಿ, ತುಮಕೂರು ಜಾಸ್ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಸ್ನೇಹಿತನ ಬರ್ತಡೇ ತೆರಳಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ತುಮಕೂರು ಎಸ್ಪಿ ಅಶೋಕ್ ಕೆ.ವಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಭಿಯ ಹೊಟ್ಟೆಗೆ ಡ್ರಾಗರ್ ನಿಂದ ಇರಿದು, ಮುಖಕ್ಕೆ ಹತ್ತು ಬಾರಿ ಲಾಂಗ್, ಮಚ್ಚುಗಳಿಂದ ದಾಳಿ ಮಾಡಿರುವ ಹಂತಕರು. ಬಳಿಕ ಮನೋಜ್ ಅಲಿಯಾಸ್ ಪ್ಯಾಚ್ ಮೇಲೆ ತಲೆಗೆ ಮಚ್ಚು ಬೀಸಿದ್ದರಿಂದ ಒಂದೇ ಏಟಿಕೆ ನೆಲಕ್ಕುರಿಳಿದ್ದ ಮನೋಜ್ ಉಳಿಯುವುದು ಡೌಟ್ ಎನ್ನಲಾಗುತ್ತಿದೆ.
ಯಾರು? ಯಾಕೆ? ಈ ದಾಳಿ ಮಾಡಿದ್ದಾರೆಂದು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ವೈದ್ಯರಾಗಲಿ, ಯಾವುದೇ ಧರ್ಮದವರಾಗಿರಲಿ ಅವ್ರು ದೇಶ ದ್ರೋಹಿಗಳೇ ; ಯುಟಿ ಖಾದರ್



















