ಪಟನಾ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ. ಮೊದಲು ಅಂಚೆ ಮತವನ್ನು ಎಣಿಸಲಾಗುತ್ತಿದ್ದು, ಆರಂಭಿಕ ಹಂತದಲ್ಲಿ ಎನ್‌ಡಿಎ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮಹಾಘಟಬಂಧನ್ 63 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಜೆಸ್‌ಪಿ 3 ಕ್ಷೇತ್ರದಲ್ಲಿ ಮುಂದಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಘೋಪೋರ್‌ನಲ್ಲಿ ಭಾರೀ ಮುನ್ನಡೆಯನ್ನು ಸಾಧಿಸಿದ್ದಾರೆ. ಇನ್ನು ಸಹೋದರ ತೇಜ್ ಪ್ರತಾಪ್ ಸಹ ಮುನ್ನಡೆಯನ್ನು ಸಾಧಿಸಿದ್ದಾರೆ.
ಗಾಯಕಿ ಮೈಥಿಲಿ ಠಾಕೂರ್ ಸಹ ಮುನ್ನಡೆಯಲ್ಲಿದ್ದಾರೆ. ರಘುನಾಥಪುರದ ಆರ್‌ಜೆಡಿ ಅಭ್ಯರ್ಥಿ ಒಸಾಮಾ ಶಹಾಬ್ ಮುನ್ನಡೆಯಲ್ಲಿದ್ದಾರೆ. ಭೋಜ್‌ಪುರಿ ಗಾಯಕ ರಿತೇಶ್ ರಂಜನ್ ಪಾಂಡೆ ಮತ್ತು ಜನಪ್ರಿಯ ಪ್ರಭಾವಿ ಮನೀಶ್ ಕಶ್ಯಪ್ ಕ್ರಮವಾಗಿ ಕಾರ್ಗಹರ್ ಮತ್ತು ಚನ್ಪಾಟಿಯಾ ಸ್ಥಾನಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಹಿನ್ನಡೆಯ ಬಳಿಕ ಲಾಲು ಯಾದವ್ ಅವರ ಮಗ ತೇಜ್ ಪ್ರತಾಪ್ ಮಹುವಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಹೊಸದಾಗಿ ಸ್ಥಾಪನೆಯಾದ ಜನ ಶಕ್ತಿ ಜನತಾದಳ ಆರಂಭಿಕ ಸಂಖ್ಯೆಗಳು ನಿಧಾನವಾಗಿ ಏರುತ್ತಿವೆ.
ಪ್ರಶಾಂತ್ ಕಿಶೋರ್ ಅವರ ಹೊಸ ಪಕ್ಷ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ ಫಲಿತಾಂಶ | ಮತ ಎಣಿಕೆ ನಿಧಾನಗೊಳಿಸುವ ಹುನ್ನಾರ ನಡೆಯುತ್ತಿದೆ : ತೇಜಸ್ವಿ ಯಾದವ್ ಆರೋಪ



















