ಚಿಕ್ಕಮಗಳೂರು: ಆಸ್ತಿಗಾಗಿ ಮಗಳೇ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.
ಕುಸುಮ ( 62 ) ಮೃತ ತಾಯಿ. 35 ವರ್ಷದ ಸುಧಾ ತನ್ನ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಮಗಳು. ತಾಯಿಯನ್ನು ಕೊಲೆಗೈದಿದ್ದ ಮಗಳು ಆರಂಭದಲ್ಲಿ, ರಾತ್ರಿ ಮಲಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದಳು. ಆದರೆ, ಪೊಲೀಸರ ತನಿಖೆಯ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಮೂಲತಃ ಹಾವೇರಿ ಜಿಲ್ಲೆಯವರಾದ ಕುಸುಮ ಬಹಳ ವರ್ಷಗಳ ಹಿಂದೆಯೇ ಬಾಳೆಹೊನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಮೃತ ಕುಸುಮಾಗೆ ಮಕ್ಕಳಿಲ್ಲದ ಕಾರಣ ತಂಗಿಯ ಮಗುವನ್ನು ತಾನೇ ಸಾಕುತ್ತಿದ್ದಳು. ಹಾವೇರಿಯಲ್ಲಿರುವ ಒಂದೂವರೆ ಎಕರೆ ಜಮೀನು ಹಾಗೂ ಒಂದು ಮನೆ ನನ್ನ ಕೈತಪ್ಪುತ್ತದೆ ಎಂದು ಸುಧಾ, ರಾತ್ರಿ ಮಲಗಿದ್ದ ತಾಯಿಗೆ ತಲೆ ದಿಂಬಿನಿಂದ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಬಾಳೆಹೊನ್ನೂರು ಪೊಲೀಸರು ಆಕೆಯನ್ನು ಜೈಲಗಟ್ಟಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯನಗರ | ಮನೆಗೆ ನುಗ್ಗಿದ್ದ ಹಾವನ್ನು ಹಿಡಿಯಲು ಯತ್ನಿಸಿದ ಯುವಕ ಸಾವು



















