ಹಾವೇರಿ : ಆಹಾರ ಇಲಾಖೆ ಸಿಬ್ಬಂದಿಯ ಯಡವಟ್ಟಿನಿಂದ ಜೀವಂತ ಬಾಲಕಿ ಪಡಿತರ ಚೀಟಿಯಲ್ಲಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎಂದು ಪಡಿತರ ಚೀಟಿಯಲ್ಲಿ ದಾಖಲಿಸಿದ್ದಾರೆ. ಇದರಿಂದ ಕುಟುಂಬಸ್ಥರು ಕಚೇರಿಗೆ ಅಲೆದಾಡುವಂತಾಗಿದೆ.
ನಗರದಲ್ಲಿ ಆಟೋ ಬಾಡಿಗೆ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಮೆಹಬೂಬಸಾಬ್ ನದಾಫ ಎಂಬುವವರು ತಮ್ಮ ಹಿರಿಯ ಮಗಳು ಸುಹನಾಗೆ ಸಿಗದಿರುವ ಪಡಿತರ ಆಹಾರದ ಬಗ್ಗೆ ವಿಚಾರಿಸಲು ತಹಶೀಲ್ದಾರ್ ಕಚೇರಿ, ಕರ್ನಾಟಕ ಒನ್ ಕೇಂದ್ರ ಸೇರಿದಂತೆ ವಿವಿಧ ಕಚೇರಿಗಳಿಗೆ ತೆರಳಿದ್ದರು. ಆಗ ಅವರಿಗೆ ಗೊತ್ತಾಗಿದ್ದು, ಜೀವಂತವಿರುವ ತಮ್ಮ ಮಗಳು ಮೂರುವರೆ ವರ್ಷದ ಹಿಂದೆಯೇ ಪಡಿತರ ದಾಖಲೆಗಳಲ್ಲಿ ಮೃತಪಟ್ಟಿದ್ದಾಳೆ ಎಂದುನಮೂದಿಸಿದ್ದಾರೆ ಎಂದು, ಪರಿಣಾಮ ಶಾಲೆಯಲ್ಲಿ ಸಿಗಬೇಕಾದ ಸ್ಕಾಲರ್ಶಿಪ್ ಸೇರಿದಂತೆ ವಿವಿಧ ಸೌಲಭ್ಯಗಳು ಸುಹನಾಗೆ ಸಿಗದಂತಾಗಿದೆ.
ಇನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡಿಸಿದ್ದಾರೆ. ಒಮ್ಮೆ ಸರ್ವರ್ ಇಲ್ಲಾ ಎನ್ನುತ್ತಾರೆ, ಸರ್ವರ್ ಬಂದಾಗ ಕರೆಸಿಕೊಂಡಿದ್ದಾರೆ. ಆಟೋ ಓಡಿಸುವುದನ್ನು ಬಿಟ್ಟು ಕಚೇರಿಗಳಿಗೆ ಅಲೆದಾಡುವುದೇ ಕೆಲಸವಾಗಿದೆ. ನನಗೆ ತಾಯಿ, ಪತ್ನಿ, ಇನ್ನೊಬ್ಬಳು ಮಗಳಿದ್ದಾಳೆ. ಅವರಿಗೆಲ್ಲಾ ನಾನೇ ಆಧಾರಸ್ತಂಭ. ನಾನು ದುಡಿಯುವುದನ್ನು ಬಿಟ್ಟು ಈ ರೀತಿ ಕಚೇರಿ ಅಲೆದಾಡಿಕೊಂಡಿದ್ದರೆ ಮನೆ ಯಾರು ನೋಡಿಕೊಳ್ಳುತ್ತಾರೆ” ಎಂದು ಮೆಹಬೂಬಸಾಬ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ