ಬೆಂಗಳೂರು : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಭಾರತದ ನಾಯಕ ಶುಭ್ಮನ್ ಗಿಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಟೀಮ್ ಇಂಡಿಯಾ ಬೊಂಬಾಟ್ ಬ್ಯಾಟಿಂಗ್ ನಡೆಸುತ್ತಿದೆ. ಅದರಲ್ಲೂ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಭಾರತದ ಮೊತ್ತ 220ರ ಅಂಚಿಗೆ ತಲುಪಿದೆ.
ಭಾರತ ಪರ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದು, ಮೊದಲ ವಿಕೆಟ್ಗೆ ಈ ಜೋಡಿ 58 ರನ್ಗಳ ಜೊತೆಯಾಟ ಆಡಿತು. ರಾಹುಲ್ 54 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ಊಟದ ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 145 ಎಸೆತಗಳಲ್ಲಿ 16 ಫೋರ್ನೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಶತಕ ಸಿಡಿಸಿದರು. ಅತ್ತ ಸಾಯಿ ಸುಧರ್ಶನ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದ ಮಧ್ಯೆ ಜೈಸ್ವಾಲ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದರು. ಅವರು 3,000 ರನ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಈ ಪಂದ್ಯಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 25 ಟೆಸ್ಟ್ ಪಂದ್ಯಗಳ 47 ಇನ್ನಿಂಗ್ಸ್‌ಗಳಲ್ಲಿ 2,245 ರನ್ ಗಳಿಸಿದ್ದರು. ಇದರಲ್ಲಿ 6 ಶತಕಗಳು ಮತ್ತು 12 ಅರ್ಧಶತಕಗಳು ಸೇರಿವೆ. ಜೈಸ್ವಾಲ್ ಅವರ ಟೆಸ್ಟ್ ಸರಾಸರಿ ಸುಮಾರು 49.88 ಆಗಿದ್ದು, ಇದನ್ನು ಅತ್ಯುತ್ತಮ ಪರಿಗಣಿಸಬಹುದು.



















