ಬೆಂಗಳೂರು: ಕೆ.ಆರ್.ಪುರಂ ನಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ವಿಪರೀತ ದಟ್ಟಣೆಯಿಂದ ವಾಹನ ಸವಾರರು ಪೇಚಾಡುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ವಾಹನಗಳು ಮತ್ತು ರಸ್ತೆ ದಾಟಲು ಜನ ಆಮೆಗತಿಯಲ್ಲಿ ಸಾಗುತ್ತಿದ್ದು, ವಾರಂತ್ಯದಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ವಾಹನ ಚಾಲಕರಿಗೆ ದಟ್ಟಣೆಯ ಸಮಸ್ಯೆ ಅಧಿಕವಾಗಿ ಕಾಡಲಾರಂಭಿಸಿದೆ.
2 ಕಿ.ಮೀ ಪ್ರಯಾಣಿಸಲು ಸುಮಾರು 20 ರಿಂದ 30 ನಿಮಿಷ ಬೇಕಾಗುತ್ತದೆ. ಇದರಿಂದ ಉದ್ಯೋ ಗಿಗಳು ನಿಗದಿತ ಇಲ್ಲಿ ಜನ–ವಾಹನ ದಟ್ಟಣೆ ಎರಡೂ ಹೆಚ್ಚಾಗಿದ್ದು, ನಿತ್ಯ ಬಸ್, ಕಾರು, ದ್ವಿಚಕ್ರ ವಾಹನ ಸೇರಿ ಲಕ್ಷಾಂತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಸಮಯಕ್ಕೆ ಕಚೇರಿ ತಲುಪಲು ಹಾಗೂ ವಿದ್ಯಾರ್ಥಿ ಗಳು ಶಾಲಾ– ಕಾಲೇ ಜಿಗೆ ತೆರಳಲು ಕಷ್ಟವಾಗಿದೆ. ಸಾವಿರಕ್ಕೂ ಅಧಿಕ ಕಂಪನಿಗಳು ಮಾರತ್ಹಳ್ಳಿ–ಬೆಳ್ಳಂದೂರು ಭಾಗದಲ್ಲಿವೆ. ಒಂದೇ ಹೊತ್ತಿಗೆ ಐಟಿ-ಬಿಟಿ ಹಾಗೂ ಇತರೆ ಕಂಪನಿಯ ಉದ್ಯೋಗಿಗಳು ಬರುತ್ತಿರುವುದು ದಟ್ಟಣೆ ಕಾರಣವಾಗಿದೆ. ಬಿಎಂಟಿಸಿ ಬಸ್ ಗಳು ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಿಕೊಳ್ಳಲು ರಸ್ತೆಯಲ್ಲಿ ನಿಲ್ಲುವುದು ಕೂಡ ಸಮಸ್ಯೆಯಾಗಿದೆ.
ಹೊರ ವರ್ತುಲ ರಸ್ತೆಯ ಇಬ್ಬಲೂರು ಜಂಕ್ಷನ್ ಬಳಿಯ ಸಂಚಾರ ದಟ್ಟಣೆ ತಪ್ಪಿಸಲು, ವಿಪ್ರೊ ಕ್ಯಾಂಪಸ್ ಮೂಲಕ ಸಾರ್ವ ಜನಿಕ ವಾಹನಗಳ ಸೀಮಿತ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಮನವಿಯನ್ನು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್ಜಿ ತಿರಸ್ಕರಿಸಿದ್ದಾರೆ. ನಗರ ಸಂಚಾರ ತಜ್ಞರು ನಡೆಸಿದ ಪ್ರಾಥಮಿಕ ಮೌಲ್ಯಮಾಪನ ಪ್ರಕಾರ, ವಿಪ್ರೊ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅನುಮತಿ ನೀಡಿದ್ದರೆ ಹೊರ ವರ್ತು ಲ ರಸ್ತೆಯಲ್ಲಿನ ದಟ್ಟಣೆ, ವಿಶೇಷವಾಗಿ ದಟ್ಟಣೆ ಅವಧಿಯಲ್ಲಿ ಶೇ. 30ರಷ್ಟು ತಗ್ಗುತ್ತಿತ್ತು.



















