ಹಾವೇರಿ : ಜಿಲ್ಲೆಯ ಹಾನಗಲ್ ತಾಲ್ಲೂಕಿನ ಶಿಕ್ಷಕರು ಗಣತಿ ಮಾಡಲು ಹಿಂದೇಟು ಹಾಕುವುದರ ಮುಖೇನೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
ಹಾನಗಲ್ ತಾಲೂಕು ಕಚೇರಿ ಮುಂದೆ ಶಿಕ್ಷಕ ಗಣತಿದಾರರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಸಮಸ್ಯೆಗಳನ್ನ ಪರಿಹರಿಸಿದರೆ ಮಾತ್ರ ಸಮೀಕ್ಷೆ ಮಾಡುತ್ತೇವೆ ಎಂದು ಪಟ್ಟು ಬಿದ್ದದ್ದಾರೆ. ಶಿಕ್ಷಕರು ಕೆಲಸ ಮಾಡುವ ಗ್ರಾಮಗಳನ್ನು ಬಿಟ್ಟು ಬೇರೆ ಗ್ರಾಮಗಳಿಗೆ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“UHID ಜಿಯೋ ಮ್ಯಾಪಿಂಗ್ ಲೋಕೇಶನ್ ಮಿಸ್ ಮ್ಯಾಚ್”
UHID ಆಧಾರದಲ್ಲಿ ಮನೆಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ, ದಿನಕ್ಕೊಂದು ಅಪ್ ಗಳನ್ನು ಡೌನ್ ಲೋಡ್ ಮಾಡಿ ಮಾಡಿ ಸಾಕಾಗಿದೆ, ನಾವು ಗಣತಿ ಮಾಡಲು ಆಗುತ್ತಿಲ್ಲ ಎಂದು ತಹಶಿಲ್ದಾರರ ರೇಣುಕಾ ಎಸ್ ಅವರ ಮುಂದೆ ಪ್ರತಿಭಟನಾನಿರತ ಗಣತಿದಾರರು ಆಕ್ರೋಶ ಹೊರಹಾಕಿದ್ದಾರೆ.