ಉಡುಪಿ : ಇಂದು ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲ್ಲೂಕು ರೈತ ಸಂಘದ ನೇತ್ರತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ ರೈತರು ಪ್ರತಿಭಟನೆಯನ್ನು ನಡೆಸಿದರು.
ಕರಾವಳಿಯ ಸೊಗಡಾಗಿರುವ ಭತ್ತ ಜಪ್ಪುವುದು,ಕಂಬಳದ ಹಾಡುಗಳನ್ನು ಹಾಡುವುದರ ಮೂಲಕ ಬಹಳ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಶುರುವಾಗಿ, ನಂತರ ಗಂಟೆಗಳೇ ಕಳೆದರು ಡಿಸಿ ಸ್ಪಂದಿಸದ ಹಿನ್ನಲೆಯಲ್ಲಿ ರೈತರು ಕಛೇರಿಗೆ ನುಗ್ಗಲು ಮುಂದಾದರು.
ಬಳಿಕ ಬಂದಂತಹ ಉಡುಪಿ ಡಿಸಿ ಸ್ವರೂಪಾ ಟಿ.ಕೆ ಮನವಿಯನ್ನು ಸ್ವೀಕರಿಸಿ “ಸರ್ಕಾರಕ್ಕೆ ಜಸ್ಟಿಫಿಕೇಷನ್ ಕೊಡುವ ಕೆಲಸ ನಾನು ಮಾಡುತ್ತೇನೆ, ಉಳಿದದ್ದು ಸರ್ಕಾರದ ಕಾರ್ಯವ್ಯಾಪ್ತಿಯಲ್ಲಿದೆ ಎಂದು ತಿಳಿಸಿದರು”
ಇನ್ನು ಈ ಕುರಿತಂತೆ ಬೈಂದೂರು ಬಿಜೆಪಿ ಮಾಜಿ ಅಧ್ಯಕ್ಷರು ಹಾಗೇ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿರುವ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ “5 ವರ್ಷಗಳ ಹಿಂದೆ ಪಟ್ಟಣ ಪಂಚಾಯತ್ ಆದಾಗ ನಮ್ಮ ಭಾಗದ ಹಳ್ಳಿಗಳಿಗೆ ಅನುದಾನ ಬಂದು ಅಭಿವೃದ್ಧಿಯಾಗುತ್ತದೆ ಎಂದು ಸಂತೋಷಪಟ್ಟಿದ್ದೆವು, ಆದರೆ ಯಾವುದೇ ಅಭಿವೃದ್ದಿ ಕಾಣದೇ ಆ ಭಾಗದ ಜನರಿಗೆ ಅನ್ಯಾಯವಾಗಿದೆ.ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದಿರು.ಮೊನ್ನೆ ಬೈಂದೂರು,ಇಂದು ಉಡುಪಿ ನಾಳೆ ವಿಧಾನಸೌಧಕ್ಕೂ ಬರಲು ತಯಾರಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಇನ್ನು ಹೋರಾಟದ ಸಮಯದಲ್ಲಿ ಬೈಂದೂರು ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಅಗಮಿಸಿ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಇನು ಈ ಸಂದರ್ಭದಲ್ಲಿ ಅರುಣ್ ಕುಮಾರ್,ವೀರಭದ್ರ ಗಾಣಿಗ,ಕೃಷ್ಣ ದೇವಾಡಿಗ, ನಾಗರಾಜ್ ಮರಾಠೆ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.