ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್ ಮತ್ತು ಐವರು ಆರೋಪಿಗಳ ಜೈಲು ಸ್ಥಳಾಂತರಿಸುವಂತೆ ಅರ್ಜಿ
ಸಲ್ಲಿಸಲಾಗಿದ್ದು,ಇಂದು 57 ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಂಬಂಧ ವಿಚಾರಣೆ ನಡೆಸಿ ಆದೇಶ ನೀಡುವ ಸಾಧ್ಯತೆ ಇದೆ.
ದರ್ಶನ್, ಜಗದೀಶ್, ಲಕ್ಷ್ಮಣ್, ನಾಗರಾಜ್, ಪ್ರದೋಶ್ ಅವರನ್ನು ಸ್ಥಳಾಂತರಿಸುವಂತೆ ಜೈಲಾಧಿಕಾರಿಗಳು ಎಸ್ಪಿ ಮೂಲಕ ಅರ್ಜಿ ಸಲ್ಲಿಸಿದ್ದು, ಆರೋಪಿಗಳು ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿರುವ ಹಿನ್ನಲೆ ಕೋರ್ಟ್ ಇಂದು(ಶನಿವಾರ) ವಿಚಾರಣೆ ನಡೆಸಿ ಆದೇಶ ನೀಡಲಿದೆ.


















