ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ಹೋದಾಗ ಗ್ಯಾಂಗ್ವೊಂದು ಪ್ರಥಮ್‌ಗೆ ಧಮ್ಕಿ ಹಾಕಿರೋ ಆರೋಪ ಕೇಳಿಬಂದಿತ್ತು. ಈ ಬಗ್ಗೆ ರಕ್ಷಕ್ ಬುಲೆಟ್ ದಾವಣಗೆರೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು ಆ ಜಾಗಕ್ಕೆ ಹೋಗಿದ್ದು ಸತ್ಯ. ದೇವಸ್ಥಾನದ ಪೂಜೆಗೆ ನಾನು ಪ್ರಥಮ್ ಅಣ್ಣ ಹೋಗಿದ್ವಿ. ಮೊದಲು ನಾನು ಹೋಗಿದ್ದೆ ನಂತರ ಪ್ರಥಮ್ ಅಣ್ಣ ಬಂದಿದ್ದರು. ಬೇರೆ ಅಲ್ಲಿ ಬಂದವರು ಯಾರು ನನಗೆ ಗೊತ್ತಿಲ್ಲ. ನಾನು ಸುಫಾರಿ ಕೊಟ್ಟು ಹೊಡಿಸೋಕೆ ಹಾಗೂ ರೌಡಿಸಂ ಮಾಡುವುದಕ್ಕೆ ನಾನು ಬಂದಿಲ್ಲ. ನಾನು ಒಬ್ಬ ಕಲಾವಿದ. ನನ್ನ ತಂದೆ ದೊಡ್ಡ ಕಲಾವಿದರು ಆ ಹೆಸರು ಉಳಿಸೋಕೆ ಬಂದಿರೋದು ಎಂದು ರಕ್ಷಕ್ ಹೇಳಿಕೆ ನೀಡಿದ್ದಾರೆ.



















