ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಅಪರಾಧ

ಸೌಮ್ಯಾ ಅತ್ಯಾಚಾರ-ಕೊಲೆ ಅಪರಾಧಿ ಗೋವಿಂದಚಾಮಿ ಕೇರಳ ಜೈಲಿಂದ ಪಲಾಯನ: ಕೆಲವೇ ಗಂಟೆಗಳಲ್ಲಿ ಅಂದರ್!

July 25, 2025
Share on WhatsappShare on FacebookShare on Twitter

ತಿರುವನಂತಪುರಂ: 2011ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋವಿಂದಚಾಮಿ (ಚಾರ್ಲಿ ಥಾಮಸ್) ಇಂದು ಕೇರಳದ ಕಣ್ಣೂರು ಕೇಂದ್ರ ಕಾರಾಗ್ರಹದಿಂದ ಪಲಾಯನಗೈದಿದ್ದಾನೆ. ಆದರೆ, ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ ಪೊಲೀಸರ ಕೈಗೆ ಮತ್ತೆ ಸೆರೆಸಿಕ್ಕಿ ಜೈಲು ಪಾಲಾಗಿದ್ದಾನೆ. ಈ ಘಟನೆಯು ಜೈಲು ಭದ್ರತೆಯ ಲೋಪಗಳನ್ನು ಬಯಲು ಮಾಡುವುದರ ಜೊತೆಗೆ, ಸೌಮ್ಯಾ ಪ್ರಕರಣದ ಭೀಕರ ನೆನಪುಗಳನ್ನು ಮತ್ತೆ ಕೆದಕಿದೆ.

ಒಂದು ಕೈ ಇಲ್ಲದ ಈ ಕೈದಿ, ಬಿಗಿಭದ್ರತೆಯ ಜೈಲಿನ 25 ಅಡಿ ಎತ್ತರದ ಗೋಡೆಯನ್ನು ಬೆಡ್‌ಶೀಟ್‌ಗಳಿಂದ ರೋಪ್ ಮಾಡಿ ಏರಿ ತಪ್ಪಿಸಿಕೊಂಡಿದ್ದ. ಪಲಾಯನದ ನಂತರ ಅವನು ತಲಪ್ ಪ್ರದೇಶದಲ್ಲಿನ ಖಾಲಿ ಮನೆಯ ಬಾವಿಗೆ ಹಾರಿ, ಪೊಲೀಸರ ಕೈಗೆ ಸಿಗದಂತೆ ಪ್ಲ್ಯಾನ್ ಮಾಡಿದ್ದ. ಆದರೆ, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯರು ಅಲರ್ಟ್ ಆದ ಕಾರಣ, 10 ಗಂಟೆಗಳ ಒಳಗಾಗಿ ಅಪರಾಧಿಯು ಬಾವಿಯೊಳಗೆ ಸಿಕ್ಕಿಬಿದ್ದಿದ್ದು, ಆತನನ್ನು ಹೊರತೆಗೆದು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ.

ಈ ಘಟನೆಯು ಜೈಲು ಭದ್ರತೆಯಲ್ಲಿನ ಲೋಪಗಳನ್ನೂ ಬೆಳಕಿಗೆ ತಂದಿದೆ. ಈತ ತಪ್ಪಿಸುವ ವೇಳೆ ವಿದ್ಯುತ್ ಕಡಿತ ಮತ್ತು ಎಲೆಕ್ಟ್ರಿಕ್ ಬೇಲಿಯನ್ನು ನಿಷ್ಕ್ರಿಯಗೊಳಿಸಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ. ಪೊಲೀಸರು ಕೆ-9 ಸ್ಕ್ವಾಡ್ ಬಳಸಿ ಹುಡುಕಾಟ ನಡೆಸಿದ್ದು, ಸ್ಥಳೀಯರು ಅವನನ್ನು ಗುರುತಿಸಿ ಮಾಹಿತಿ ನೀಡಿದ್ದರಿಂದ ಶೀಘ್ರ ಸೆರೆ ಸಾಧ್ಯವಾಯಿತು ಎಂದು ಹೇಳಲಾಗಿದೆ.

ಪಲಾಯನದ ವಿವರಗಳು

ಪಲಾಯನ ಸಮಯ:

ಗುರುವಾರ ತಡರಾತ್ರಿ 1:15ರಿಂದ ಶುಕ್ರವಾರ ಬೆಳಗಿನ ಜಾವ 4:15ರ ನಡುವೆ ಈ ಪಲಾಯನ ನಡೆದಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಜೈಲು ಸಿಬ್ಬಂದಿಗೆ ಈತ ಪರಾರಿಯಾಗಿರುವುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ, ಅವನು ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಒಂದು ಕೈಯನ್ನು ಪಾಕೆಟ್‌ನಲ್ಲಿ ಮರೆಮಾಚಿ ನಡೆಯುತ್ತಿರುವುದು ಕಂಡುಬಂದಿದೆ.

ಪಲಾಯನ ವಿಧಾನ:

ಜೈಲು ಕಂಬಿಗಳನ್ನು ಕತ್ತರಿಸಿ, ಬೆಡ್‌ಶೀಟ್‌ಗಳಿಂದ ಹಗ್ಗ ತಯಾರಿಸಿ 7.5 ಮೀಟರ್ ಎತ್ತರದ ಗೋಡೆ ಏರಿದ್ದಾನೆ. ಈ ಸಮಯದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು ಮತ್ತು ಫೆನ್ಸಿಂಗ್ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಈತನಿಗೆ ತಪ್ಪಿಸಿಕೊಳ್ಳಲು ಸುಲಭವಾಗಿದೆ ಎಂದು ಶಂಕಿಸಲಾಗಿದೆ.

ಸೆರೆಯಾಗಿದ್ದು ಹೇಗೆ?

ಸ್ಥಳೀಯರು ಅವನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ, ಆತ ಸಿಕ್ಕಿಬಿದ್ದಿದ್ದಾನೆ. ಆದರೂ ಆತ ಬಾವಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ, ಮಾಧ್ಯಮ ಕ್ಯಾಮೆರಾಗಳ ಮುಂದೆಯೇ ಪೊಲೀಸರು ಅವನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಲಾಯನವು ಜೈಲು ವ್ಯವಸ್ಥೆಯ ಭದ್ರತೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ. ಜೈಲು ಅಧಿಕಾರಿಗಳು ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆ ನಡೆದ ಸಮಯದಲ್ಲಿ ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಸೌಮ್ಯಾ ಅವರ ತಾಯಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಇದು ಹೊರಗಿನ ಸಹಾಯವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ದೇಶವನ್ನೇ ಬೆಚ್ಚಿಬೀಳಿಸಿದ ಸೌಮ್ಯಾ ಪ್ರಕರಣ

ತಮಿಳುನಾಡು ಮೂಲದ ಗೋವಿಂದಚಾಮಿ, ಕೇರಳಕ್ಕೆ ಬರುವ ಮುನ್ನವೇ ತನ್ನ ತವರು ರಾಜ್ಯದಲ್ಲಿ 8 ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳವನು. ಫೆಬ್ರವರಿ 1, 2011ರಂದು, 23 ವರ್ಷದ ಸೌಮ್ಯಾ ಎರ್ನಾಕುಲಂ-ಶೋರನೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಗೋವಿಂದಚಾಮಿ ಆಕೆಯನ್ನು ದರೋಡೆ ಮಾಡಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದ. ನಂತರ, ರೈಲ್ವೆ ಹಳಿಯ ಬಳಿಯಿದ್ದ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ, ತ್ರಿಶೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 6 ರಂದು ಮೃತಪಟ್ಟಳು. ಈ ಘಟನೆಯು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ನ್ಯಾಯಾಲಯದ ತೀರ್ಪುಗಳು: ಗಲ್ಲು ಶಿಕ್ಷೆಯಿಂದ ಜೀವಾವಧಿಗೆ

ಈ ಪ್ರಕರಣದ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯವು 2012ರಲ್ಲಿ ಗೋವಿಂದಚಾಮಿಯನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತು. ಇದನ್ನು 2013ರಲ್ಲಿ ಕೇರಳ ಹೈಕೋರ್ಟ್ ಕೂಡ ಎತ್ತಿಹಿಡಿಯಿತು. ಆದರೆ, 2016ರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ, ಗೋವಿಂದಚಾಮಿಯ ಮೇಲಿದ್ದ ಕೊಲೆ ಆರೋಪವನ್ನು ಕೈಬಿಟ್ಟಿತು. ಅತ್ಯಾಚಾರ ಮತ್ತು ಗಾಯಗೊಳಿಸಿದ್ದಕ್ಕಾಗಿ ಅವನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಈ ತೀರ್ಪು ದೇಶಾದ್ಯಂತ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿತ್ತು.

Tags: ArrestescapesGovindachamyKeralaMurderPolicerape accused
SendShareTweet
Previous Post

ರಾಜ್ಯಸಭಾ ಸದಸ್ಯರಾಗಿ ಕಮಲ್‌ ಹಾಸನ್‌ ಪ್ರಮಾಣ ವಚನ ಸ್ವೀಕಾರ

Next Post

ಶಿವ ದೇಗುಲಕ್ಕಾಗಿ ಥಾಯ್ಲೆಂಡ್-ಕಾಂಬೋಡಿಯಾ ಗಡಿಯಲ್ಲಿ ಭೀಕರ ಸೇನಾ ಸಂಘರ್ಷ: 12 ಸಾವು

Related Posts

ಮಗನ ಅಂತ್ಯಕ್ರಿಯೆ ಮುಗಿದ 15 ದಿನಗಳ ಬಳಿಕ ಜೈಲಿನಿಂದ ಬಂತು ಫೋನ್ ಕರೆ: ‘ನಿಮ್ಮ ಮಗ ಬದುಕಿದ್ದಾನೆ!’
ಅಪರಾಧ

ಮಗನ ಅಂತ್ಯಕ್ರಿಯೆ ಮುಗಿದ 15 ದಿನಗಳ ಬಳಿಕ ಜೈಲಿನಿಂದ ಬಂತು ಫೋನ್ ಕರೆ: ‘ನಿಮ್ಮ ಮಗ ಬದುಕಿದ್ದಾನೆ!’

ಒಬ್ಬಳನ್ನೇ ಪ್ರೀತಿಸಿದ ಗೆಳೆಯರು: ಕೊಲೆಯಲ್ಲಿ ಅಂತ್ಯವಾಯ್ತು ತ್ರಿಕೋನ ಪ್ರೇಮ ಕಥೆ!
ಅಪರಾಧ

ಒಬ್ಬಳನ್ನೇ ಪ್ರೀತಿಸಿದ ಗೆಳೆಯರು: ಕೊಲೆಯಲ್ಲಿ ಅಂತ್ಯವಾಯ್ತು ತ್ರಿಕೋನ ಪ್ರೇಮ ಕಥೆ!

ತಂದೆ-ಮಗನ ಅನುಮಾನಾಸ್ಪದ ಸಾವಿಗೆ ಬಿಗ್‌ ಟ್ವಿಸ್ಟ್‌ ; ಲವ್ವರ್ ಜೊತೆ ಸೇರಿ ಪತಿ-ಪುತ್ರನನ್ನೇ ಮುಗಿಸಿದ ಪಾಪಿ ಪತ್ನಿ!
ಬೆಂಗಳೂರು

ತಂದೆ-ಮಗನ ಅನುಮಾನಾಸ್ಪದ ಸಾವಿಗೆ ಬಿಗ್‌ ಟ್ವಿಸ್ಟ್‌ ; ಲವ್ವರ್ ಜೊತೆ ಸೇರಿ ಪತಿ-ಪುತ್ರನನ್ನೇ ಮುಗಿಸಿದ ಪಾಪಿ ಪತ್ನಿ!

ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ಮುಖಂಡನಿಂದ ಹಲ್ಲೆ.. ವಿಡಿಯೋ ವೈರಲ್‌!
ಬೆಂಗಳೂರು

ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ಮುಖಂಡನಿಂದ ಹಲ್ಲೆ.. ವಿಡಿಯೋ ವೈರಲ್‌!

ಬೆಂಗಳೂರಲ್ಲಿ ಸರಗಳ್ಳರ ಅಟ್ಟಹಾಸ ; ಮಹಿಳೆಯ ಮಾಂಗಲ್ಯ ಕಸಿದು ಪರಾರಿ!
ಬೆಂಗಳೂರು

ಬೆಂಗಳೂರಲ್ಲಿ ಸರಗಳ್ಳರ ಅಟ್ಟಹಾಸ ; ಮಹಿಳೆಯ ಮಾಂಗಲ್ಯ ಕಸಿದು ಪರಾರಿ!

ಪ್ರಜ್ವಲ್ ಸೆಲ್​​​​ನಲ್ಲಿ ಸಿಕ್ಕ ಮೊಬೈಲ್‌ನಲ್ಲಿ 90ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ.. ಪೊಲೀಸರೇ ಶಾಕ್‌!
ಬೆಂಗಳೂರು

ಪ್ರಜ್ವಲ್ ಸೆಲ್​​​​ನಲ್ಲಿ ಸಿಕ್ಕ ಮೊಬೈಲ್‌ನಲ್ಲಿ 90ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ.. ಪೊಲೀಸರೇ ಶಾಕ್‌!

Next Post
ಶಿವ ದೇಗುಲಕ್ಕಾಗಿ ಥಾಯ್ಲೆಂಡ್-ಕಾಂಬೋಡಿಯಾ ಗಡಿಯಲ್ಲಿ ಭೀಕರ ಸೇನಾ ಸಂಘರ್ಷ: 12 ಸಾವು

ಶಿವ ದೇಗುಲಕ್ಕಾಗಿ ಥಾಯ್ಲೆಂಡ್-ಕಾಂಬೋಡಿಯಾ ಗಡಿಯಲ್ಲಿ ಭೀಕರ ಸೇನಾ ಸಂಘರ್ಷ: 12 ಸಾವು

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮಹಾನಗರ ಪಾಲಿಕೆಯಲ್ಲಿ 116 ಹುದ್ದೆಗಳ ನೇಮಕಾತಿ : ಕನ್ನಡ ಮಾತಾಡಲು ಬಂದರೆ ಸಾಕು

ಮಹಾನಗರ ಪಾಲಿಕೆಯಲ್ಲಿ 116 ಹುದ್ದೆಗಳ ನೇಮಕಾತಿ : ಕನ್ನಡ ಮಾತಾಡಲು ಬಂದರೆ ಸಾಕು

ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ

ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ

ESIC ಕಾರ್ಡ್ ಹೊಂದಿರುವವರೇ ಗಮನಿಸಿ : ಆರೋಗ್ಯ ಸೇವೆ ಪಡೆಯಲು ಮೊದಲು ಈ ಕೆಲಸ ಮಾಡಿ

ESIC ಕಾರ್ಡ್ ಹೊಂದಿರುವವರೇ ಗಮನಿಸಿ : ಆರೋಗ್ಯ ಸೇವೆ ಪಡೆಯಲು ಮೊದಲು ಈ ಕೆಲಸ ಮಾಡಿ

ಗುರುಗ್ರಾಮ ಹಿಟ್ ಆ್ಯಂಡ್ ರನ್ ಕೇಸ್‌ : ಆರೋಪಿ ಕಲ್ಯಾಣ್ ವಿರುದ್ಧ ಕೊ* ಯತ್ನ ಪ್ರಕರಣ ದಾಖಲು

ಗುರುಗ್ರಾಮ ಹಿಟ್ ಆ್ಯಂಡ್ ರನ್ ಕೇಸ್‌ : ಆರೋಪಿ ಕಲ್ಯಾಣ್ ವಿರುದ್ಧ ಕೊ* ಯತ್ನ ಪ್ರಕರಣ ದಾಖಲು

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮಹಾನಗರ ಪಾಲಿಕೆಯಲ್ಲಿ 116 ಹುದ್ದೆಗಳ ನೇಮಕಾತಿ : ಕನ್ನಡ ಮಾತಾಡಲು ಬಂದರೆ ಸಾಕು

ಮಹಾನಗರ ಪಾಲಿಕೆಯಲ್ಲಿ 116 ಹುದ್ದೆಗಳ ನೇಮಕಾತಿ : ಕನ್ನಡ ಮಾತಾಡಲು ಬಂದರೆ ಸಾಕು

ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ

ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat