ಬೆಂಗಳೂರು: ಬಡವರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೇಂದ್ರ ಸರ್ಕಾರವು ಸ್ಕಾಲರ್ ಶಿಪ್ ನೀಡುತ್ತದೆ. ಇದಕ್ಕಾಗಿಯೇ ‘ಪ್ರಧಾನಮಂತ್ರಿ ಯಶಸ್ವಿ ಯೋಜನೆ’ ಜಾರಿಗೊಳಿಸಿದೆ. ಹಿಂದುಳಿದ ವರ್ಗದ (OBC), ಆರ್ಥಿಕವಾಗಿ ಹಿಂದುಳಿದ ವರ್ಗದ (EBC) ಮತ್ತು ಅಲೆಮಾರಿ ಬುಡಕಟ್ಟು (DNT) ವಿದ್ಯಾರ್ಥಿಗಳಿಗೆ ವಾರ್ಷಿಕ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ. ವಿದ್ಯಾರ್ಥಿ ವೇತನದಲ್ಲಿ 30ರಷ್ಟು ಹೆಣ್ಣುಮಕ್ಕಳಿಗೆ ಮೀಸಲು. ವಿಶೇಷ ಚೇತನ ವಿದ್ಯಾರ್ಥಿಗಳಗಿಎ ಶೇ.5ರಷ್ಟು ವಿದ್ಯಾರ್ಥಿವೇತನ ಮೀಸಲಿಡಲಾಗಿದೆ.
ಯಾರಿಗೆ ಎಷ್ಟು ಸ್ಕಾಲರ್ ಶಿಪ್
- 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ 4,000 ರೂ. ವಿದ್ಯಾರ್ಥಿವೇತನ.
- 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ 5,000 ರಿಂದ ₹20,000 ರೂ.ವರೆಗೆ ಸ್ಕಾಲರ್ ಶಿಪ್.
- 11-12ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ವಾರ್ಷಿಕ 1,25,000 ರೂಪಾಯಿ ವಿದ್ಯಾರ್ಥಿವೇತನ.
- ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ 2 ಲಕ್ಷ ರಿಂದ 3.72 ಲಕ್ಷ ರೂ.ವರೆಗೆ ಸಹಾಯಧನ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಒಬಿಸಿ, ಆರ್ಥಿಕವಾಗಿ ಹಿಂದುಳಿದವರು, ಅಲೆಮಾರಿ ಜನಾಂಗದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ಕನಿಷ್ಠ 75% ಹಾಜರಾತಿ ಇರಬೇಕು.
- ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು.
ಸ್ಕಾಲರ್ ಶಿಪ್ ನೀಡುವುದು ಹೇಗೆ?
ಅಭ್ಯರ್ಥಿಗಳು https://scholarships.gov.in/Students ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇದಾದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಯಶಸ್ವಿ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು. ಜಾತಿ ಪ್ರಮಾಣಪತ್ರ, ಇನ್ ಕಮ್ ಸರ್ಟಿಫಿಕೇಟ್, ವಿದ್ಯಾರ್ಹತೆ ಪ್ರಮಾಣಪತ್ರ ನೀಡಬೇಕು. ಇದಾದ ಬಳಿಕ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಸ್ಕಾಲರ್ ಶಿಪ್ ಜಮೆಯಾಗುತ್ತದೆ.



















