ಗುಬ್ಬಿ : ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬ ಮತ್ತು ಮರದ ಕೊಂಬೆಗಳು ರಸ್ತೆಗೆ ಬಿದ್ದಿದರಿಂದ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗತಿಗೊಂಡಿದೆ.
ಶಾಲಾ ವಾಹನಗಳು ,ಬಸ್ ಗಳು ಆಟೋಗಳು ರಸ್ತೆಯಲ್ಲಿ ನಿಂತಿದ್ದು ಕೂಡಲೆ ಊರಿನ ಗ್ರಾಮಸ್ಥರೇ ಧರಾಶಾಹಿಯಾಗಿದ್ದ ಮರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ರಸ್ತೆ ಪಕ್ಕಕ್ಕೆ ಹಾಕಿ ಸುಗಮ ಸಂಚಾರಕ್ಕೆ ಅನವು ಮಾಡಿಕೊಟ್ಟರು.
ಬೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಂಬ ಬಿದ್ದ ಮಾಹಿತಿ ನೀಡಿದರೂ ಸಕಾಲಕ್ಕೆ ಬಂದು ತೆರವುಗೊಳಿಸದ ಕಾರಣ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.ಗುಬ್ಬಿ ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಜನಜೀವನ ಅಸ್ಥವ್ಯಸ್ಥವಾಗಿದೆ.



















