ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಕೇರಳದ ನರ್ಸ್ ಜೀವ ಉಳಿಸಲು ಕೊನೇ ಕ್ಷಣದ ಹೋರಾಟ: ಸುನ್ನಿ ಧಾರ್ಮಿಕ ಮುಖಂಡ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಯೆಮನ್‌ನಲ್ಲಿ ಮಾತುಕತೆ ಆರಂಭ!

July 15, 2025
Share on WhatsappShare on FacebookShare on Twitter

ನವದೆಹಲಿ: ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ (36) ಎಂಬ ನರ್ಸ್‌ನ ಭವಿಷ್ಯವು ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. 2017ರಲ್ಲಿ ಯೆಮನ್‌ನಲ್ಲಿ ತಲಾಲ್ ಅಬ್ದೊ ಮೆಹದಿ ಎಂಬುವವರ ಕೊಲೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾಳನ್ನು ರಕ್ಷಿಸಲು, ಭಾರತದ ಪ್ರಮುಖ ಸುನ್ನಿ ಮುಸ್ಲಿಂ ಧಾರ್ಮಿಕ ನಾಯಕ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್‌ನಲ್ಲಿ ತುರ್ತು ಮಾತುಕತೆಗಳನ್ನು ಆರಂಭಿಸಿದ್ದಾರೆ. ಜುಲೈ 16ರ ಬುಧವಾರ ನಿಮಿಷಾಳ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲು ಯೆಮನ್‌ನ ಹೌತಿ ಆಡಳಿತವು ಒಪ್ಪಿಗೆ ನೀಡಿದ ಬೆನ್ನಲ್ಲೇ, ಈ ಮಾತುಕತೆ ನಡೆಯುತ್ತಿದ್ದು, ನಿಮಿಷಾಗೆ ಕೊನೇ ನಿಮಿಷದಲ್ಲಾದರೂ ಬದುಕುವ ಭರವಸೆ ಸಿಗಬಹುದೇ ಎಂದು ಆಕೆಯ ಕುಟುಂಬಸ್ಥರು ಕಾಯುತ್ತಿದ್ದಾರೆ.

ನಿಮಿಷಾ ಪ್ರಿಯಾ 2008ರಲ್ಲಿ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಕೇರಳದಿಂದ ಯೆಮನ್‌ಗೆ ತೆರಳಿದ್ದರು. ಸಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿದ ನಂತರ, 2015ರಲ್ಲಿ ಯೆಮನ್ ಕಾನೂನಿನ ಪ್ರಕಾರ ಸ್ಥಳೀಯ ಪಾಲುದಾರನೊಂದಿಗೆ ತಮ್ಮದೇ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಈ ಪಾಲುದಾರ ತಲಾಲ್ ಅಬ್ದೊ ಮೆಹದಿ. ಆದರೆ, ತಲಾಲ್‌ನೊಂದಿಗೆ ಹಣಕಾಸಿನ ಮತ್ತು ವೈಯಕ್ತಿಕ ವಿವಾದಗಳು ಶುರುವಾದವು. ನಿಮಿಷಾ ಅವರು ತಲಾಲ್‌ನ ಮೇಲೆ ಹಣ ದುರುಪಯೋಗ ಮತ್ತು ತಮ್ಮ ಪಾಸ್‌ಪೋರ್ಟ್ ಕಸಿದುಕೊಂಡ ಆರೋಪ ಹೊರಿಸಿದ್ದರು.

ಈ ವಿವಾದದ ನಡುವೆ, 2017ರ ಜುಲೈನಲ್ಲಿ ನಿಮಿಷಾ ತಮ್ಮ ಪಾಸ್‌ಪೋರ್ಟ್ ಮರಳಿ ಪಡೆಯಲು ತಲಾಲ್‌ಗೆ ಕೀಟಾಮಿನ್ ಎಂಬ ಇಂಜೆಕ್ಷನ್ ಚುಚ್ಚಿದರು. ಆದರೆ, ಅದು ಓವರ್ ಡೋಸ್ ಆಗಿ ಅವನ ಸಾವಿಗೆ ಕಾರಣವಾಯಿತು. ಬಳಿಕ ಆಕೆ ತನ್ನ ಸ್ನೇಹಿತೆಯ ಸಹಾಯ ಪಡೆದು, ತಲಾಲ್‌ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಟ್ಯಾಂಕ್ ವೊಂದರಲ್ಲಿ ಹಾಕಿ ಅಲ್ಲಿಂದ ಕಾಲ್ಕಿತ್ತಳು. ಯೆಮನ್‌ನಿಂದ ಪರಾರಿಯಾಗಲು ಯತ್ನಿಸುವಾಗ ನಿಮಿಷಾಳನ್ನು ಬಂಧಿಸಲಾಯಿತು ಮತ್ತು 2020ರಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. 2023ರಲ್ಲಿ ಯೆಮನ್‌ನ ಸರ್ವೋಚ್ಚ ನ್ಯಾಯಾಲಯವು ಈ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಜು.16ರ ಬುಧವಾರ ಆಕೆಯನ್ನು ಗಲ್ಲಿಗೇರಿಸಲು ತೀರ್ಮಾನಿಸಲಾಯಿತು.

ಕಾಂತಪುರಂ ಅವರ ಆಶಾದಾಯಕ ಮಧ್ಯಸ್ಥಿಕೆ
ಭಾರತದ ಸುನ್ನಿ ಧಾರ್ಮಿಕ ಗುರು ಮತ್ತು ಸುನ್ನಿ ಜಮೀಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್‌ನ ಪ್ರಮುಖ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಮೂಲಕ ತಲಾಲ್‌ನ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಯೆಮನ್‌ನ ಧಮಾರ್ ಪ್ರದೇಶದಲ್ಲಿ ಇಂದು (ಜುಲೈ 15) ನಡೆಯುತ್ತಿರುವ ಈ ಮಾತುಕತೆಗಳಲ್ಲಿ ತಲಾಲ್‌ನ ಸಹೋದರ, ಯೆಮನ್ ಸರ್ಕಾರದ ಪ್ರತಿನಿಧಿಗಳು, ಜಿನಾಯತ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಸ್ಥಳೀಯ ಬುಡಕಟ್ಟು ನಾಯಕರು ಭಾಗವಹಿಸಿದ್ದಾರೆ.

ಕಾಂತಪುರಂ ಅವರ ಕಚೇರಿಯ ಪ್ರಕಾರ, ನಿಮಿಷಾ ಪ್ರಿಯಾಗೆ ಕ್ಷಮೆ ನೀಡುವಂತೆ ತಲಾಲ್‌ನ ಕುಟುಂಬವನ್ನು ಅವರು ವೈಯಕ್ತಿಕವಾಗಿ ಮನವಿ ಮಾಡುತ್ತಿದ್ದಾರೆ. ಇದಕ್ಕಾಗಿ ಶರಿಯಾ ಕಾನೂನಿನಡಿ “ದಿಯಾ” (ರಕ್ತದ ಹಣ) ಅಂದರೆ, ಸುಮಾರು 1 ಮಿಲಿಯನ್ ಯುಎಸ್ ಡಾಲರ್ (ಅಂದಾಜು 11 ಕೋಟಿ ರೂಪಾಯಿಗಳು) ಪರಿಹಾರವನ್ನು ನೀಡುವ ಭರವಸೆ ನೀಡಲಾಗಿದೆ.

ಶರಿಯಾ ಕಾನೂನು ಮತ್ತು ಬ್ಲಡ್ ಮನಿ
ಯೆಮನ್‌ನ ಹೌತಿ-ನಿಯಂತ್ರಿತ ಪ್ರದೇಶಗಳಲ್ಲಿ ಶರಿಯಾ ಕಾನೂನಿನಡಿಯಲ್ಲಿ, ಕೊಲೆ ಆರೋಪಿಯನ್ನು ಗಲ್ಲಿಗೇರಿಸುವ ಬದಲು, ಸಂತ್ರಸ್ತನ ಕುಟುಂಬವು “ದಿಯಾ” ಎಂಬ ಆರ್ಥಿಕ ಪರಿಹಾರವನ್ನು ಸ್ವೀಕರಿಸಿ ಕ್ಷಮೆ ನೀಡಬಹುದು. ಈ ಹಣಕ್ಕೆ ಬ್ಲಡ್ ಮನಿ ಎನ್ನಲಾಗುತ್ತದೆ. “ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್” ಈ ಬ್ಲಡ್ ಮನಿಗಾಗಿ ಕ್ರೌಡ್‌ಫಂಡಿಂಗ್ ಮೂಲಕ 2024ರ ಜೂನ್‌ವರೆಗೆ 40,000 ಯುಎಸ್ ಡಾಲರ್‌ಗಳನ್ನು ಸಂಗ್ರಹಿಸಿತ್ತು.

ಆದರೆ, ತಲಾಲ್‌ನ ಕುಟುಂಬ ಮತ್ತು ಧಮಾರ್ ಪ್ರದೇಶದ ಬುಡಕಟ್ಟು ಸಮುದಾಯಗಳಿಗೆ ಈ ಕೊಲೆ ಒಂದು ಭಾವನಾತ್ಮಕ ಮತ್ತು ಗೌರವದ ವಿಷಯವಾಗಿದ್ದರಿಂದ, ಈವರೆಗೆ ಯಾವುದೇ ಸಂಪರ್ಕ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಈಗ ಕಾಂತಪುರಂ ಅವರ ಮಧ್ಯಸ್ಥಿಕೆಯಿಂದ ಇದೀಗ ಮೊದಲ ಬಾರಿಗೆ ತಲಾಲ್‌ನ ಕುಟುಂಬದೊಂದಿಗೆ ನೇರ ಮಾತುಕತೆ ಸಾಧ್ಯವಾಗಿದೆ. ಆದರೆ, ಅವರು ಬ್ಲಡ್ ಮನಿ ಸ್ವೀಕರಿಸಲು ಒಪ್ಪುತ್ತಾರೋ, ಇಲ್ಲವೋ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಕೈಚೆಲ್ಲಿದ ಭಾರತ ಸರ್ಕಾರ
ಭಾರತ ಸರ್ಕಾರವು ಈ ಪ್ರಕರಣದಲ್ಲಿ ಸಾಧ್ಯವಾದಷ್ಟು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆದರೆ, ಯೆಮನ್‌ನಲ್ಲಿ ಭಾರತದ ರಾಜತಾಂತ್ರಿಕ ಉಪಸ್ಥಿತಿಯ ಕೊರತೆ ಮತ್ತು ಹೌತಿ ಆಡಳಿತವನ್ನು ಅಧಿಕೃತವಾಗಿ ಗುರುತಿಸದಿರುವುದು ಸರ್ಕಾರದ ಕೈಗೆ ಸೀಮಿತ ಆಯ್ಕೆಗಳನ್ನು ನೀಡಿದೆ. ಅಟಾರ್ನಿ ಜನರಲ್ ಆರ್. ವೆಂಕಟರಾಮನಿ ಅವರು ಸೋಮವಾರವಷ್ಟೇ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಿ, “ಯೆಮನ್ ಒಂದು ಸಾಮಾನ್ಯ ದೇಶವಲ್ಲ, ರಾಜತಾಂತ್ರಿಕವಾಗಿ ಗುರುತಿಸಲ್ಪಡದ ಪ್ರದೇಶವಾಗಿದೆ, ಆದ್ದರಿಂದ ಸರ್ಕಾರವು ಕೆಲವು ಶೇಖ್‌ಗಳ ಮೂಲಕ ಖಾಸಗಿಯಾಗಿ ಪ್ರಯತ್ನಿಸಿದೆ. ಇನ್ನೇನೂ ಮಾಡಲು ನಮ್ಮಿಂದ ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ನಿಮಿಷಾ ಪ್ರಿಯಾಳ ಜೀವ ಉಳಿಸುವ ಈ ಕೊನೆಯ ಪ್ರಯತ್ನ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕು.

Tags: A.P. AbubakarKeralaMusliyarNurseyemen
SendShareTweet
Previous Post

ಕುಡುಕ ಗಂಡನನ್ನು ಕೊಂದು, ಮನೆಯಲ್ಲೇ ಶವವನ್ನು ಹೂತುಹಾಕಿದ ಮಹಿಳೆ!

Next Post

ಭುವಿಗೆ ಬಂದ ಶುಭಾಂಶು ಶುಕ್ಲಾ

Related Posts

ಕಾಂಗ್ರೆಸ್‌ಗೆ ಮಿಲೇನಿಯಲ್ಸ್ ಆಯ್ತು, ಈಗ ಜೆನ್-ಝೀ ಕೂಡ ಪಾಠ ಕಲಿಸುತ್ತಿದೆ | ‘ವೋಟ್ ಚೋರಿ’ ಆರೋಪಕ್ಕೆ ಮೋದಿ ತಿರುಗೇಟು!
ದೇಶ

ಕಾಂಗ್ರೆಸ್‌ಗೆ ಮಿಲೇನಿಯಲ್ಸ್ ಆಯ್ತು, ಈಗ ಜೆನ್-ಝೀ ಕೂಡ ಪಾಠ ಕಲಿಸುತ್ತಿದೆ | ‘ವೋಟ್ ಚೋರಿ’ ಆರೋಪಕ್ಕೆ ಮೋದಿ ತಿರುಗೇಟು!

ಬೊಲಿವಿಯಾದಲ್ಲಿ ಸೇನಾ ವಿಮಾನ ಪತನ : ಹೆದ್ದಾರಿ ಮೇಲೆ ಹಣದ ಮಳೆ, 15 ಜನರ ದುರ್ಮರಣ!
ವಿದೇಶ

ಬೊಲಿವಿಯಾದಲ್ಲಿ ಸೇನಾ ವಿಮಾನ ಪತನ : ಹೆದ್ದಾರಿ ಮೇಲೆ ಹಣದ ಮಳೆ, 15 ಜನರ ದುರ್ಮರಣ!

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ | ಈಗ ಟಿಕೆಟ್ ಬುಕ್ಕಿಂಗ್ ಮೇಲೆ ಸಿಗಲಿದೆ ಶೇ.1ರಷ್ಟು ಕ್ಯಾಶ್ ಬ್ಯಾಕ್!
ದೇಶ

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ | ಈಗ ಟಿಕೆಟ್ ಬುಕ್ಕಿಂಗ್ ಮೇಲೆ ಸಿಗಲಿದೆ ಶೇ.1ರಷ್ಟು ಕ್ಯಾಶ್ ಬ್ಯಾಕ್!

ಭಾರತಕ್ಕೆ ಆಪಲ್ ಪೇ ಲಗ್ಗೆ | ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ?
ದೇಶ

ಭಾರತಕ್ಕೆ ಆಪಲ್ ಪೇ ಲಗ್ಗೆ | ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ?

ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪ | ಕಟ್ಟಡದಿಂದ ಓಡೋಡಿ ಹೊರ ಬಂದ ಜನ!
ದೇಶ

ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪ | ಕಟ್ಟಡದಿಂದ ಓಡೋಡಿ ಹೊರ ಬಂದ ಜನ!

ಅಫ್ಘನ್-ಪಾಕ್ ಗಡಿಯಲ್ಲಿ “ಬಹಿರಂಗ ಯುದ್ಧ” | ಕಾಬೂಲ್ ಮೇಲೆ ಪಾಕ್ ಬಾ* ದಾಳಿ.. 133 ಮಂದಿ ಸಾವು!
ವಿದೇಶ

ಅಫ್ಘನ್-ಪಾಕ್ ಗಡಿಯಲ್ಲಿ “ಬಹಿರಂಗ ಯುದ್ಧ” | ಕಾಬೂಲ್ ಮೇಲೆ ಪಾಕ್ ಬಾ* ದಾಳಿ.. 133 ಮಂದಿ ಸಾವು!

Next Post
ಭುವಿಗೆ ಬಂದ ಶುಭಾಂಶು ಶುಕ್ಲಾ

ಭುವಿಗೆ ಬಂದ ಶುಭಾಂಶು ಶುಕ್ಲಾ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಾಂಗ್ರೆಸ್‌ಗೆ ಮಿಲೇನಿಯಲ್ಸ್ ಆಯ್ತು, ಈಗ ಜೆನ್-ಝೀ ಕೂಡ ಪಾಠ ಕಲಿಸುತ್ತಿದೆ | ‘ವೋಟ್ ಚೋರಿ’ ಆರೋಪಕ್ಕೆ ಮೋದಿ ತಿರುಗೇಟು!

ಕಾಂಗ್ರೆಸ್‌ಗೆ ಮಿಲೇನಿಯಲ್ಸ್ ಆಯ್ತು, ಈಗ ಜೆನ್-ಝೀ ಕೂಡ ಪಾಠ ಕಲಿಸುತ್ತಿದೆ | ‘ವೋಟ್ ಚೋರಿ’ ಆರೋಪಕ್ಕೆ ಮೋದಿ ತಿರುಗೇಟು!

ರಣಜಿ ಫೈನಲ್‌.. ಪಂದ್ಯ ವೀಕ್ಷಿಸಲು ಹುಬ್ಬಳ್ಳಿಗೆ ಆಗಮಿಸಿದ ಜಮ್ಮು ಸಿಎಂ

ರಣಜಿ ಫೈನಲ್‌.. ಪಂದ್ಯ ವೀಕ್ಷಿಸಲು ಹುಬ್ಬಳ್ಳಿಗೆ ಆಗಮಿಸಿದ ಜಮ್ಮು ಸಿಎಂ

ಪರೀಕ್ಷೆ ದಿನವೇ ದ್ವಿತೀಯ ಪಿಯು ವಿದ್ಯಾರ್ಥಿನಿ ಹೃದಯಾಘಾತದಿಂದ ಕೊನೆಯುಸಿರು

ಪರೀಕ್ಷೆ ದಿನವೇ ದ್ವಿತೀಯ ಪಿಯು ವಿದ್ಯಾರ್ಥಿನಿ ಹೃದಯಾಘಾತದಿಂದ ಕೊನೆಯುಸಿರು

IPL 2026ಕ್ಕೆ ಚುನಾವಣಾ ಬಿಸಿ | ಟೂರ್ನಿ ಆರಂಭದ ದಿನಾಂಕ ವಿಳಂಬ.. ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ

IPL 2026ಕ್ಕೆ ಚುನಾವಣಾ ಬಿಸಿ | ಟೂರ್ನಿ ಆರಂಭದ ದಿನಾಂಕ ವಿಳಂಬ.. ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಾಂಗ್ರೆಸ್‌ಗೆ ಮಿಲೇನಿಯಲ್ಸ್ ಆಯ್ತು, ಈಗ ಜೆನ್-ಝೀ ಕೂಡ ಪಾಠ ಕಲಿಸುತ್ತಿದೆ | ‘ವೋಟ್ ಚೋರಿ’ ಆರೋಪಕ್ಕೆ ಮೋದಿ ತಿರುಗೇಟು!

ಕಾಂಗ್ರೆಸ್‌ಗೆ ಮಿಲೇನಿಯಲ್ಸ್ ಆಯ್ತು, ಈಗ ಜೆನ್-ಝೀ ಕೂಡ ಪಾಠ ಕಲಿಸುತ್ತಿದೆ | ‘ವೋಟ್ ಚೋರಿ’ ಆರೋಪಕ್ಕೆ ಮೋದಿ ತಿರುಗೇಟು!

ರಣಜಿ ಫೈನಲ್‌.. ಪಂದ್ಯ ವೀಕ್ಷಿಸಲು ಹುಬ್ಬಳ್ಳಿಗೆ ಆಗಮಿಸಿದ ಜಮ್ಮು ಸಿಎಂ

ರಣಜಿ ಫೈನಲ್‌.. ಪಂದ್ಯ ವೀಕ್ಷಿಸಲು ಹುಬ್ಬಳ್ಳಿಗೆ ಆಗಮಿಸಿದ ಜಮ್ಮು ಸಿಎಂ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat