ಚಿಕ್ಕಮಗಳೂರು: ತಿರುಪತಿ ರೈಲು ಸೇವೆಗೆ ಶುಕ್ರವಾರ ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸೇವೆ ಆರಂಭವಾಗಿರುವುದಕ್ಕೆ ವೃದ್ಧೆಯೋರ್ವರು ವಿಶೇಷ ರೀತಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ರೈಲಿನ ಮುಂದೆ ನಿಂತು ನಮಸ್ಕರಿಸಿ, ಅಡ್ಡ ಬಿದ್ದು ವೃದ್ಧೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ವೃದ್ಧೆ ಲಕ್ಷ್ಮಿ ಎನ್ನುವವರು ರೈಲಿಗೆ ಅಡ್ಡಬಿದ್ದು ನಮಸ್ಕರಿಸಿದ್ದು, ನಾನು ನಾನು 5 ಬಾರಿ ತಿರುಪತಿಗೆ ಹೋಗಿದ್ದೇನೆ. ಆದರೆ, ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸೇವೆ ಆರಂಭವಾಗಿರುವುದು ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.



















