ರಾಜ್ಯ ರಾಜಕೀಯದಲ್ಲಿ ಉಲ್ಬಣಿಸಿರೋ ಕುರ್ಚಿ ಕದನಕ್ಕೆ ಇಂದು ತೆರೆ ಬೀಳಲಿದೆಯಾ. ಇಲ್ಲಾ ಕ್ರಾಂತಿಯ ಕಹಳೆ ಮೊಳಗಲಿದೆಯಾ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ದೆಹಲಿ ವರಿಷ್ಠರ ಅಂಗಳದಲ್ಲಿರುವ ಸಿಎಂ ಕುರ್ಚಿ ಕದನದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ರೂ ಶಸ್ತ್ರತ್ಯಾಗದ ಮೂಡ್ ನಲ್ಲಿಲ್ಲ. ಹೀಗಾಗಿ ವರಿಷ್ಠರು ಎದುರಾಗಿರೋ ಬಿಕ್ಕಟ್ಟನ್ನು ಅತ್ಯಂತ ನಾಜೂಕಾಗಿ ನಿಭಾಯಿಸೋ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಎರಡು ಸುತ್ತಿನ ಶಾಸಕರ ಅಹವಾಲು ಸ್ವೀಕರಿಸಿರುವ ಸುರ್ವೇವಾಲಾ ಮುಂದೆ ಹಲವರು, ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗ್ತಿದೆ. ಕೆಲವರು ಡಿಕೆಶಿಗೆ ಪಟ್ಟ ಕಟ್ಟಬೇಕು ಅಂತಾ ಆಗ್ರಹಿಸಿದ್ದಾರೆ. ಇನ್ನು ಸಿದ್ದರಾಮಯ್ಯರನ್ನ ಕೆಳಗಿಳಿಸಿದ್ರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಅಂತಾ ಅವರ ಆಪ್ತರು ಖಡಕ್ ಆಗೇ ಹೇಳಿದ್ದಾರೆ. ಹೀಗಾಗಿ ಅಡಕತ್ತರಿಯಲ್ಲಿ ಸಿಲುಕಿರುವ ಹೈಕಮಾಂಡ್ ಇನ್ನೇನು ಕೆಲ ಹೊತ್ತಲೇ ಸಿಎಂ, ಡಿಸಿಎಂ ಜೊತೆ ಚರ್ಚೆ ನಡೆಸಲಿದೆ.
ಈ ವೇಳೆ, ರಾಹುಲ್ ಗಾಂಧಿ ಸಂಧಾನದ ಸೂತ್ರ ಹೆಣೆದು ಸರಿದೂಗಿಸಿಕೊಂಡು ಹೋಗುವಂತೆ ಸೂಚಿಸುವ ಸಾಧ್ಯತೆಗಳಿವೆ. ಹೀಗಾಗಿ ಯಾರ ಯಾವ ನಡೆಗೆ ಬದ್ಧವಾಗಿರ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಹೀಗಾಗಿ ಸಿಎಂ ಕುರ್ಚಿ ಗುದ್ದಾಟದಲ್ಲಿ ಕದನ ವಿರಾಮವೋ ಇಲ್ಲಾ, ಕ್ರಾಂತಿಯ ರಣಕಹಳೆಯೋ ಅನ್ನೋದು ಕೌತುಕದ ಅಂಶವಾಗಿದೆ.



















