ಎಜ್ಬಾಸ್ಟನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ (Akash Deep) ಮಾರಕ ಬೌಲಿಂಗ್ ನಿಂದಾಗಿ ಭಾರತ ಭರ್ಜರಿ ಜಯ ಸಾಧಿಸಿದೆ.
ಎರಡನೇ ಪಂದ್ಯದಲ್ಲಿ ಭಾರತ (Team India) ತಂಡವು 336 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಜಯ ಸಾಧಿಸಿವೆ. ಗೆಲುವಿಗಾಗಿ ಎರಡನೇ ಇನ್ನಿಂಗ್ಸ್ ನಲ್ಲಿ 608 ರನ್ ಗಳ ಗುರಿ ಪಡೆದ ಇಂಗ್ಲೆಂಡ್ (England) ತಂಡವು 5ನೇ ದಿನದಾಟದಲ್ಲಿ ಒಟ್ಟು 68.1 ಓವರ್ ಗಳಲ್ಲಿ 271 ರನ್‌ಗಳಿಸಿ ಭಾರತ ತಂಡಕ್ಕೆ ಶರಣಾಯಿತು. ಈ ಮೂಲಕ ಭಾರತ ತಂಡ 336 ರನ್‌ಗಳ ಭರ್ಜರಿ ಜಯ ಸಾಧಿಸಿತು.
4ನೇ ದಿನದ ಅಂತ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 72 ರನ್‌ಗಳಿಸಿದ್ದ ಇಂಗ್ಲೆಂಡ್ ಇಂದು 7 ವಿಕೆಟ್ ಕಳೆದುಕೊಂಡು ಒಟ್ಟು 199 ರನ್ ಗಳಿಸಿತು. ಇಂದು ಬೆನ್ ಸ್ಟೋಕ್ ಮತ್ತು ಜೇಮಿ ಸ್ಮಿತ್ 115 ಎಸೆತಗಳಲ್ಲಿ 70 ರನ್ ಗಳಿಸಿ, ಭಾರತ ತಂಡಕ್ಕೆ ಸ್ವಲ್ಪ ಒತ್ತಡ ನೀಡಿತು..ಭಾರತದ ಪರ ಆಕಾಶ್ ದೀಪ್ ಮೊದಲ ಬಾರಿಗೆ 6 ವಿಕೆಟ್ ಕಿತ್ತು ಮಿಂಚಿದರು. ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
2ನೇ ಪಂದ್ಯದ ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ -587/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ -407/10
ಭಾರತ ಎರಡನೇ ಇನ್ನಿಂಗ್ಸ್ – 427/6 ಡಿಕ್ಲೇರ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ – 271/10