ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಇರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಗಳು ರಾರಾಜಿಸಿವೆ.
ನಂದಿ ದೇವಸ್ಥಾನ ಬಳಿ ನಾಯಕರು ಹಾಗೂ ಕಾರ್ಯಕರ್ತರ ಫ್ಲೆಕ್ಸ್ ಹಾಗೂ ಬ್ಯಾನರ್ ರಾರಾಜಿಸುತ್ತಿವೆ. ಕಾಂಗ್ರೆಸ್ ಬಾವುಟ, ಸಿಎಂ, ಡಿಸಿಎಂ ಪ್ಲೆಕ್ಸ್, ಬ್ಯಾನರ್ ಗಳನ್ನು ಕಾರ್ಯಕರ್ತರು ಎಲ್ಲೆಂದರಲ್ಲಿ ಅಳವಡಿಸಿದ್ದಾರೆ. ಹೀಗಾಗಿ ನಂದಿ ದೇವಸ್ಥಾನ ಸುತ್ತಮುತ್ತ ಬ್ಯಾನರ್, ಬಂಟಿಂಗ್ಸ್ ಗಳದ್ದೇ ಹವಾ ಎನ್ನುವಂತಾಗಿದೆ. ಸಚಿವ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಇರುವ ಬ್ಯಾನರ್ ಗಳು ಕೂಡ ರಾರಾಜಿಸುತ್ತಿವೆ.