ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಬೆಂಗಳೂರಲ್ಲಿ ಇಂದಿನಿಂದ ಟೋಲ್ ದರ ಹೆಚ್ಚಳವಾಗಿದೆ. ಹೊಸೂರು ರಸ್ತೆಯ ಎರಡು ಟೋಲ್‌ನಲ್ಲೂ ದರ ಹೆಚ್ಚಳವಾಗಿದೆ. ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಹೆಚ್ಚಳವಾಗಿದೆ. ದಿನದ ಟೋಲ್ ದರ, ತಿಂಗಳ ಪಾಸ್ ಹಾಗೂ ವಾರ್ಷಿಕ ಪಾಸ್ ದರ ಹೆಚ್ಚಳವಾಗಿದೆ. ಈ ಮೂಲಕ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದೆ.
ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ಟೋಲ್ ನಲ್ಲಿ ಕೂಡ ಹೆಚ್ಚಳವಾಗಿದೆ. ಎಲಿವೇಟೆಡ್ ಕಾರಿಡಾರ್ ಗೆ ಒಳಪಡುವ ಎಲೆಕ್ಟ್ರಾನ್ ಸಿಟಿ ಮತ್ತು ಅತ್ತಿಬೆಲೆ ಟೋಲ್ ಏರಿಕೆಯಾಗಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ..
- ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ ರೂ.65 (ಹಳೆ ಬೆಲೆ 60)
- ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 (ಹಳೆ ಬೆಲೆ 85)
- ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)
- ಲಾರಿ (ಟ್ರಕ್) ಹಾಗೂ ಬಸ್ ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170)
- ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂ. (ಹಳೆ ಬೆಲೆ 345)
ಅತ್ತಿಬೆಲೆ ಟೋಲ್ ದರವೂ ಹೆಚ್ಚಳ - ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂ. (ಹಳೆ ಬೆಲೆ 35)
- ಲಘು ವಾಹನಗಳು, ಮಿನಿ ಬಸ್ 65 (ಹಳೆ ಬೆಲೆ 60)
- ಟ್ರಕ್, ಬಸ್ 125 (ಹಳೆ ಬೆಲೆ 120)
- ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260)



















