“ರಾಮಾ ರಾಮಾ ರೇ” ಖ್ಯಾತಿಯ ನಿರ್ದೇಶಕ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ “X&Y” ಚಿತ್ರದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಸತ್ಯಪ್ರಕಾಶ್, ವಿಭಿನ್ನ ಕಥಾಹಂದರ ಹೊಂದಿರುವ ” X&Y”, ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಚಿತ್ರದ ಮತ್ತೊಂದು ವಿಶೇಷವೆಂದರೆ ನಾನು ಈ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ನಾನು ಚೆನ್ನಾಗಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ಈ ಚಿತ್ರದಲ್ಲಿ ನಟಿಸಿರುವ ಅನುಭವಿ ಕಲಾವಿದರು. ಅವರನೆಲ್ಲಾ ನೋಡಿ ನಾನು ಅಭಿನಯ ಕಲಿತ್ತಿದ್ದೇನೆ.

ಇನ್ನೂ ಕೌಶಿಕ್ ಹರ್ಷ ಸಂಗೀತ ನೀಡಿರುವ ಹಾಡುಗಳಂತೂ ಒಂದಕ್ಕಿಂತ ಒಂದು ಮಧುರವಾಗಿದೆ. ಲವಿತ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ ನಮ್ಮ ಚಿತ್ರದ ಹೈಲೆಟ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಾನೇ ಬರೆದಿದ್ದೇನೆ ಎಂದಿದ್ದಾರೆ.
ಇಂತಹ ಲವಲವಿಕೆಯಿಂದ ಕೂಡಿರುವ ತಂಡದ ಜೊತೆಗೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ಕಥೆ ಕೇಳಿದ ತಕ್ಷಣ ಇಷ್ಟವಾಯಿತು. ಕೃಪ ನನ್ನ ಪಾತ್ರದ ಹೆಸರು ಎಂದರು ನಟಿ ಬೃಂದಾ ಆಚಾರ್ಯ.

ಹಾಡುಗಳು ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ಹರ್ಷ ಕೌಶಿಕ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಧರ್ಮಣ್ಣ, ಸುಂದರ್, ಅಥರ್ವ ಪ್ರಕಾಶ್, ಹರಿಣಿ, ಆಯನಾ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಲವಿತ್, ಸಂಕಲನಕಾರ ಬಿ.ಎಸ್.ಕೆಂಪರಾಜ್ ಮುಂತಾದ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ವಿ.ಮನೋಹರ್ ಅವರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಟಿ ಬೃಂದಾ ಆಚಾರ್ಯ ಇದ್ದರು.