ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿದೆ. ಇದರಿಂದಾಗಿ ಜನರ ಮನೆಗಳಿಗೆ ಉಚಿತವಾಗಿ, ಆದ್ರೆ 200 ಯೂನಿಟ್ ಗಳವರೆಗೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಆದರೆ, ನಿಮ್ಮ ಮನೆಗೆ ಜೀವನ ಪರ್ಯಂತ ಉಚಿತವಾಗಿ ವಿದ್ಯುತ್ ಪಡೆಯಬೇಕಾ? ಆ ಮೂಲಕ ಮಾಸಿಕ ವಿದ್ಯುತ್ ಬಿಲ್ ಪಾವತಿಸುವುದರಿಂದ ಮುಕ್ತರಾಗಬೇಕಾ? ಹಾಗಾದ್ರೆ, ನೀವು ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯನ್ನ ಜಾರಿಗೆ ತಂದಿದೆ. ಹಾಗಾದ್ರೆ ಏನಿದು ಯೋಜನೆ? ಇದರ ಉಪಯೋಗಗಳೇನು? ಇಲ್ಲಿದೆ ಸ್ಟೋರಿ.
ಏನಿದು ಸೂರ್ಯ ಘರ್ ಯೋಜನೆ?
ಯೋಜನೆಯ ಉಪಯೋಗಗಳು ಏನೇನು?
ಯಾರೆಲ್ಲ ಯೋಜನೆಯ ಲಾಭ ಪಡೆಯಬಹುದು?
ದೇಶದ ಪ್ರತಿಯೊಂದು ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೂರ್ಯ ಘರ್ ಯೋಜನೆ ಜಾರಿಗೆ ತಂದಿದೆ. ಮನೆಯ ತಾರಸಿ ಮೇಲೆಯೇ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಹಾಗೂ ವಿದ್ಯುತ್ ಉತ್ಪಾದನೆಯ ಮೇಲಿನ ಅವಲವಂಬನೆಯನ್ನು ತಗ್ಗಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ. ಮನೆಯ ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸುವ ಮೂಲಕ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಅನ್ನು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಯೋಜನೆಯಿಂದ ಮನೆಮಂದಿ ತಿಂಗಳಿಗೆ 300 ಯುನಿಟ್ ವಿದ್ಯುತ್ ಅನ್ನು ಪಡೆಯಲಿದ್ದಾರೆ.
ಮನೆಗೆ ಎಷ್ಟು ಬೇಕಾದ್ರೂ ವಿದ್ಯುತ್ ಬಳಕೆ ಮಾಡಿ
ಹೆಚ್ಚು ವಿದ್ಯುತ್ ಉತ್ಪಾದನೆ ಆದ್ರೆ ಮಾರಾಟ ಮಾಡಿ
ಕರ್ನಾಟಕದಲ್ಲೂ ಜಾರಿಯಾಗಿದೆ ಈ ಯೋಜನೆ
ಫೆಬ್ರವರಿ 15, 2024 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಸೂರ್ಯ ಘರ್ ಯೋಜನೆಯು ಕರ್ನಾಟಕದಲ್ಲೂ ಜಾರಿಯಾಗಿದೆ. ಪ್ರತಿ ತಿಂಗಳು 300 ಯೂನಿಟ್ ವರೆಗೆ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು, ಹೆಚ್ಚುವರಿ ಯೂನಿಟ್ ವಿದ್ಯುತ್ ಅನ್ನು ವಿದ್ಯುತ್ ಸರಬರಾಜು ನಿಗಮಗಳಿಗೇ ಮಾರಾಟ ಮಾಡಬಹುದಾಗಿದೆ. ಮನೆಗೆ ಉಚಿತ ವಿದ್ಯುತ್ ಪಡೆಯುವ ಜತೆಗೆ ಹಣವನ್ನೂ ಗಳಿಸಬಹುದಾಗಿದೆ.
ಯೋಜನೆಯ ಕಾರ್ಯನಿರ್ವಹಣೆ ಹೇಗೆ?
ಇದಕ್ಕೆ ಆಗುವ ಒಟ್ಟು ಖರ್ಚು ಎಷ್ಟು?
ಸರ್ಕಾರದಿಂದ ಎಷ್ಟು ಸಬ್ಸಿಡಿ ಲಭ್ಯ?
ಸೂರ್ಯ ಘರ್ ಯೋಜನೆಯ ಅಡಿಯಲ್ಲಿ ಮನೆಯ ಚಾವಣಿ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ. ಸೌರ ಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ 60% ವರೆಗೂ ಸಬ್ಸಿಡಿಯನ್ನು ನೀಡಲಾಗುತ್ತದೆ. 1 ಕಿ.ವ್ಯಾಟ್ ನಿಂದ 3 ಕಿ.ವ್ಯಾಟ್ ವರೆಗಿನ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ಸರ್ಕಾರ ಧನ ಸಹಾಯ ನೀಡುತ್ತದೆ.
ಅಂದರೆ, 1 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅಳವಡಿಕೆಗೆ 30,000 ರೂ. ಸಹಾಯಧನ, 2 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅವಳವಡಿಕೆಗೆ 60,000 ರೂ. ಸಹಾಯಧನ ಹಾಗೂ 3 ಕಿ.ವ್ಯಾಟ್ ಅಥವಾ ಹೆಚ್ಚಿನ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅವಳವಡಿಕೆಗೆ 78,000 ರೂ. ಸಹಾಯಧನ ಲಭ್ಯವಾಗಲಿದೆ. ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ 17000 ರೂ. ದಿಂದ 18000 ರೂ. ನಷ್ಟು ಆದಾಯ ಗಳಿಸಬಹುದಾಗಿದೆ.
ಯೋಜನೆಗೆ ಯಾರೆಲ್ಲ ಅರ್ಹರು?
- ಭಾರತೀಯ ಪ್ರಜೆ ಆಗಿರಬೇಕು
- ಸ್ವಂತ ಮನೆ ಹೊಂದಿರಬೇಕು
- ಮನೆ ಮೇಲೆ ಹೆಚ್ಚಿನ ಜಾಗ ಇರಬೇಕು
- ಸರ್ಕಾರದ ಭೇರೆ ಸೌಲಭ್ಯ ಪಡೆದಿರಬಾರದು
ಗ್ರಾಫಿಕ್ಸ್ ಔಟ್…
ಇಷ್ಟೆಲ್ಲ ಅರ್ಹತೆ ಇದ್ದವರು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಗುರುತಿನ ಚೀಟಿ, ವಿಳಾಸದ ದಾಖಲೆ, ಕಳೆದ ತಿಂಗಳ ವಿದ್ಯುತ್ ಬಿಲ್ ಇದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು https://www.pmsuryaghar.gov.in ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಾಲ ಸೌಲಭ್ಯವನ್ನೂ ನೀಡಲಾಗುತ್ತದೆ. ಶೇ.6ರ ಬಡ್ಡಿಯೊಂದಿಗೆ ಮೇಲಾಧಾರ ರಹಿತ ಸಾಲದ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಸೀಮಿತ ಅವಧಿ ಇರುತ್ತೆ. ಆದ್ರೆ,. ಒಮ್ಮೆ ಸೂರ್ಯ ಘರ್ ಯೋಜನೆ ಅನ್ವಯ ಸೋಲಾರ್ ಪ್ಯಾನೆಲ್ ಅಳವಡಿಕೆ ಮಾಡಿಕೊಂಡರೆ, ಜೀವನ ಪೂರ್ತಿ ಉಚಿತವಾಗಿ ವಿದ್ಯುತ್ ಪಡೆಯಬಹುದಾಗಿದೆ. ಮತ್ತಿನ್ಯಾಕೆ ತಡ, ಕೂಡ್ಲೇ ಅರ್ಜಿ ಸಲ್ಲಿಸಿ.