ಆರ್ ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ವೇಳೆ ಹಾಸನ ಜಿಲ್ಲೆಯ ಭೂಮಿಕ್ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಇನ್ನೂ ನಿಂತಿಲ್ಲ.
ಭೂಮಿಕ್ ಅವರ ತಂದೆ ಮಗನ ಸಮಾಧಿಯ ಬಳಿ ಉರುಳಾಡಿ ಕಣ್ಣೀರು ಸುರಿಸುತ್ತಿದ್ದಾರೆ. ನನ್ನ ಮಗನನ್ನು ನನಗೆ ಮರಳಿ ಕೊಡಿ ಎಂದು ಗೋಗರೆಯುತ್ತಿದ್ದಾರೆ. ನನ್ನ ಪರಿಸ್ಥಿತಿ ಯಾವ ತಂದೆ-ತಾಯಿಗೂ ಬರಬಾರದು ಎಂದು ಕಣ್ಣೀರು ಸುರಿಸುತ್ತಿದ್ದಾರೆ.



















