ಬೆಂಗಳೂರು: ಬಕ್ರೀದ್ ಇರುವ ಹಿನ್ನೆಲೆಯಲ್ಲಿ ಕೆ.ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
ನಾಗವಾರ ಜಂಕ್ಷನ್ ನಿಂದ ಪಾಟರಿ ಸರ್ಕಲ್ ವರೆಗೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ
ನಾಗವಾರ ಜಂಕ್ಷನ್ನಿಂದ ಪಾಟರಿ ಸರ್ಕಲ್ವರೆಗೆ ಸಂಚಾರ ಮಾರ್ಗ ನಿರ್ಬಂಧಿಸಲಾಗಿದೆ.
ನಾಗವಾರ ಜಂಕ್ಷನ್ ನಿಂದ ಶಿವಾಜಿನಗರಕ್ಕೆ ಹೋಗುವ ವಾಹನ ಸವಾರರು ನಾಗವಾರ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಜಂಕ್ಷನ್ ರಸ್ತೆಯಲ್ಲಿ ಬಲ ತಿರುವು ಪಡೆದುಕೊಂಡು ಕಾಚರಕನಹಳ್ಳಿ ರಸ್ತೆ, ಚಂದ್ರಿಕ ಜಂಕ್ಷನ್ ಎಡ ತಿರುವು ಲಿಂಗರಾಜಪುರಂ ಪ್ರೈ ಓವರ್ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ರಾಬರ್ಟ್ನ್ ರಸ್ತೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪಬಹುದಾಗಿದೆ.
ಶಿವಾಜಿನಗರ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದುಕೊಂಡು ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ವೀಲರ್ಸ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ನಾಗವಾರ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.
ಆರ್.ಟಿ. ನಗರದಿಂದ ಕಾವಲ್ ಬೈರಸಂದ್ರ ಮೂಲಕ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.
ನಿಲುಗಡೆ ನಿಷೇಧಿತ ಸ್ಥಳಗಳು:
ಪಾಟರಿ ಸರ್ಕಲ್ ನಿಂದ ನಾಗವಾರ ಜಂಕ್ಷನ್ ವರೆಗೆ ಎಲ್ಲ ಮಾದರಿಯ ವಾಹನಗಳ ಪಾರ್ಕಿಂಗ್ ನ್ನು ನಿಷೇಧಿಸಲಾಗಿದೆ.