ನಟ ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ತೆರೆಕಂಡು ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ನಾಯಕಿ ಮೌನ ಅವರು ಮಡೆನೂರು ಮನು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮಡೆನೂರು ಮನು ಸ್ಟಾರ್ ನಟರ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿದ ಸಹನಟಿ ಮೌನ ಗುಡ್ಡೆಮನೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಡಿಬಾಸ್ ಫ್ಯಾನ್.. ಅವರ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತನಾಡಿರುವುದು ಸಹಿಸಲು ಆಗುತ್ತಿಲ್ಲ.
ನಾನು ನಟಿಸಿದ ಮೊದಲ ಸಿನಿಮಾವೇ ಹೀಗಾಯಿತಲ್ಲ ಎಂದು ನನಗೆ ಸಂಕಟವಾಗುತ್ತಿದೆ. ನಾನು ಸಿನಿಮಾ ಪರವಾಗಿ ಮಾತನಾಡಲೇಬೇಕು. ಇದು ನನ್ನ ಮೊದಲ ಸಿನಿಮಾ. ಸುಮಾರು ವರ್ಷಗಳಿಂದ ಸಿನಿಮಾಗಾಗಿ ಒದ್ದಾಡುತ್ತಿದ್ದೇವೆ. ರಿಲೀಸ್ ಆದ ಬಳಿಕ ಈಗ ಒಳ್ಳೆಯ ರೆಸ್ಪಾನ್ಸ್ ಇದೆ. ಖುಷಿಯಿದೆ. ಆದರೆ ಕೆಲವರು ಇಂತಹ ಸಿನಿಮಾ ಮಾಡಿದ್ದೀಯಾ? ಅಂತ ಕೇಳುವಾಗ ಮನಸ್ಸಿಗೆ ನೋವಾಗುತ್ತದೆ ಎಂದಿದ್ದಾರೆ. ಚಿತ್ರತಂಡ ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಕುಲದಲ್ಲಿ ಕೀಳ್ಯಾವುದೋ ಸಿನಿಮಾನ ಗೆಲ್ಲಿಸಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದೆ.