ಭಾರತ ಪಾಕಿಸ್ಥಾನದ ನಡುವೆ ನಡೆದ ಆಪರೇಷನ್ ಸಿಂಧೂರ್ ಬಗ್ಗೆ ಪ್ರಪಂಚದ ಎಲ್ಲಾ ದೇಶಗಳಿಗೂ ಮಾಹಿತಿ ನೀಡಲು ಕೇಂದ್ರ ಸರ್ಕಾರ ರಚನೆ ಮಾಡಿರುವ 7 ಸಂಸದರ ತಂಡಗಳು ವಿದೇಶಕ್ಕೆ ತೆರಳಲು ಸಜ್ಜಾಗಿದೆ. ಸಂಸದರ ನಿಯೋಗವು ಈಗಾಗಲೇ ತರಬೇತಿಯನ್ನು ಮುಗಿಸಿದ್ದು ಸಂಸದರಾದ ರವಿಶಂಕರ್ ಪ್ರಸಾದ್, ಶಶಿ ತರೂರ್, ಕನ್ನಿಮೊಳಿ, ಸುಪ್ರಿಯಾ ಸುಳೆ ಅವರುಗಳ ತಂಡ ವಿದೇಶಕ್ಕೆ ಪ್ರವಾಸ ಬೆಳೆಸಿದ್ದಾರೆ. 10 ದಿನಗಳ ಇಡೀ ಪ್ರಪಂಚವನ್ನು ಈ ಸಂಸದರ ತಂಡ ಸುತ್ತು ಹಾಕಲಿದ್ದು, ಆಪರೇಷನ್ ಸಿಂಧೂರ್ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಿದೆ.



















