ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಗೆಲುವಿನ ಮೂಲಕ ರಾಜಸ್ಥಾನ್ ತಂಡ ತನ್ನ ಅಭಿಯಾನ ಮುಗಿಸಿದೆ.
ವೈಭವ್ ಸೂರ್ಯವಂಶಿ (Vaibhav Suryavanshi)ಅವರ ಅಮೋಘ ಅರ್ಧಶತಕದ ಬ್ಯಾಟಿಂಗ್ ನೆರವಿನೊಂದಿಗೆ ರಾಜಸ್ಥಾನ್ಸ್ ರಾಯಲ್ಸ್ (Rajasthan Royals) ತಂಡ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 6 ವಿಕೆಟ್ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್ ಆರ್ ಗೆ ಉತ್ತಮ ಆರಂಭ ಸಿಕ್ಕಿತು. ಪರುಣಾಮ 17.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಯಶಸ್ವಿ ಜೈಸ್ವಾಲ್ 36 ರನ್, ವೈಭವ್ ಸೂರ್ಯವಂಶಿ 57 ರನ್, ಸಂಜು ಸ್ಯಾಮ್ಸನ್ 41 ರನ್, ರಿಯಾನ್ ಪರಾಗ್ 3 ರನ್, ಧ್ರುವ್ ಜುರೆಲ್ 31 ರನ್ ಹಾಗೂ ಶಿಮ್ರಾನ್ ಹೆಟ್ಮೆಯರ್ 12 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಚೆನ್ನೈ ಪರ ರವಿಚಂದ್ರನ್ ಅಶ್ವಿನ್ 2, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಆರಂಭಿಕ ಆಘಾತ ಎದುರಿಸಿತ್ತು. ಆದರೆ, ನಂತರ ಚೇತರಿಕೆ ಕಂಡು 187 ರನ್ ಗಳಿಸಿತ್ತು. ಆಯುಷ್ ಮಾತ್ರೆ 43 ರನ್, ಡೆವೊನ್ ಕಾನ್ವೇ 10 ರನ್, ರವಿಚಂದ್ರನ್ ಅಶ್ವಿನ್ 13 ರನ್, ಡೆವಾಲ್ಡ್ ಬ್ರೆವಿಸ್ 42 ರನ್, ಶಿವಂ ದುಬೆ 39 ರನ್, ಎಂಎಸ್ ಧೋನಿ 16 ರನ್ ಗಳಿಸಿದರು.