ಬೆಂಗಳೂರು: ಸಾಯಿ ಲೇಔಟ್ ನಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾದಂತೆ ಆಗಿತ್ತು. ಸದ್ಯ ಪ್ರವಾಹ ಸ್ಥಿತಿ ಕಡಿಮೆಯಾಗಿದ್ದು, ಹಾವುಗಳು ಹೆಚ್ಚಾಗುತ್ತಿವೆ.
ಸಾಯಿ ಲೇ ಔಟ್ ನಲ್ಲಿ ನೀರು ಇಳಿಯುತ್ತಿದ್ದಂತೆ ಹಾವುಗಳ ಕಾಟ ಶುರುವಾಗಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಹಲವಾರು ಮನೆಗಳಲ್ಲಿ ಹಾವಿನ ಮರಿಗಳು ಪತ್ತೆಯಾಗಿವೆ. ಹಾವಿನ ಮರಿಗಳನ್ನು ಹಿಡಿದು ಉರಗ ತಜ್ಞರು ರಕ್ಷಿಸುತ್ತಿದ್ದಾರೆ. ಹೀಗಾಗಿ ನೀರು ಖಾಲಿಯಾಗಿರುವ ಮನೆಗಳಲ್ಲಿ ಸಿವಿಲ್ ಡಿಫೆನ್ಸ್ ತಂಡದ ಜೊತೆ ಉರಗ ತಜ್ಞರು ರೌಂಡ್ಸ್ ಮಾಡುತ್ತಿದ್ದಾರೆ.



















