ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಎರಡು ಬೃಹತ್ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ಈ ದೀಪಗಳು ತಲಾ 50 ಕೆಜಿ ತೂಕ ಹೊಂದಿದ್ದು, ಟಿಟಿಡಿ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದೆ. ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇಗುಲಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ 2 ಬೃಹತ್ ಬೆಳ್ಳಿಯ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ ತಿಳಿಸಿದೆ.
ತಲಾ 50 ಕೆಜಿ ತೂಕದ 2 ಬೆಳ್ಳಿ ದೀಪಗಳನ್ನು ದೇವಸ್ಥಾನದ ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನದಿಯು ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರ ಸಮ್ಮುಖದಲ್ಲಿ ಪ್ರಮೋದಾದೇವಿ ಹಸ್ತಾಂತರಿಸಿದರು. 300 ವರ್ಷಗಳ ಹಿಂದೆಯೂ ಅಂದಿನ ಮೈಸೂರು ಮಹಾರಾಜರು ದೇವಸ್ಥಾನಕ್ಕೆ ದೀಪಗಳನ್ನು ದಾನ ಮಾಡಿದ್ದರು ಎಂದು ಟಿಟಿಡಿ ತಿಳಿಸಿದೆ.



















