ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಡಿಜಿಟಲ್ ಅರೆಸ್ಟ್ ಆಗಿ ಬರೋಬ್ಬರಿ 37 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಶೃಂಗೇರಿಯಲ್ಲಿ ನಡೆದಿದೆ. ನಿವೃತ್ತ ಸರ್ಕಾರಿ ನೌಕರೊಬ್ಬರನ್ನು ಆನ್ ಲೈನ್ ವಂಚಕರು ಮೋಸ ಮಾಡಿದ್ದಾರೆ. ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಡಿಜಿಟಲ್ ಅರೆಸ್ಟ್ (Digital Arrest) ಮಾಡಿದ್ದಾರೆ. ನಿಮ್ಮ ಹೆಸರಿನಲ್ಲಿನ ಆಧಾರ್ ಕಾರ್ಡ್ ನ್ನು ಯಾರೋ ಒಬ್ಬರು ಬಳಕೆ ಮಾಡಿ ಮನಿ ಲಾಂಡರಿಂಗ್ ಮಾಡುತ್ತಿದ್ದಾರೆಂದು ವಂಚಕರು ಹೇಳಿ ಹೆದರಿಸಿ, ವಾಟ್ಸಪ್ ವಿಡಿಯೋ ಕಾಲ್ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ.
ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್‌ಬಿಐನಿಂದ ಪರಿಶೀಲನೆ ಮಾಡಿಸಿ, ಮರಳಿ ನೀಡುವುದಾಗಿ ಹೇಳಿದ್ದಾರೆ. ಆಗ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಜೊತೆಗೆ ತಮ್ಮ ಪತ್ನಿಯ ಖಾತೆಯಲ್ಲಿದ್ದ ಒಟ್ಟು 37 ಲಕ್ಷ ರೂ. ಹಣವನ್ನು ನಕಲಿ ಆರ್‌ಬಿಐ ಖಾತೆ ವರ್ಗಾಯಿಸಿದ್ದಾನೆ. ಹೀಗೆ ಯಾರಿಗೂ ಹೇಳದೆ ವ್ಯಕ್ತಿಯು 6 ತಿಂಗಳು ಕಳೆದಿದ್ದಾರೆ. ಹಣ ಮಹಳಿ ಬಾರದಿದ್ದಾಗ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



















