ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಪಾಕಿಸ್ತಾನದ ವಿರುದ್ದ ಸಮರ ಸಾರಿದೆ. ಪಾಕ್ ಮತ್ತು ಭಾರತದ ಗಡಿಯಲ್ಲಿ ಯುದ್ಧ ಕಾರ್ಮೋಡ ಆವರಿಸಿದೆ.
ಇದೀಗ ಯುದ್ಧದ ಎಫೆಕ್ಟ್ ಸಿಲಿಕಾನ್ ಸಿಟಿಗೂ ತಟ್ಟಿದೆ. ಈಗಾಗಲೇ ಉತ್ತರ ಭಾರತದ ಪ್ರವಾಸಕ್ಕೆ ಹೋಗುವುದು ಶೇ.90ರಷ್ಟು ಸ್ಥಬ್ದವಾಗಿದೆ. ಉತ್ತರ ಭಾರತಕ್ಕೆ ತೆರಳುತ್ತಿರುವ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಯುದ್ದದಿಂದಗಿ ಉತ್ತರ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿರುವ ಕಾರಣ ಉತ್ತರ ಭಾರತಕ್ಕೆ ತೆರಳುವ ಬಸ್ ಗಳು ಖಾಲಿ ಖಾಲಿಯಾಗಿವೆ.
ಕೋಲ್ಕತಾ,ಪಂಜಾಬ್, ದೆಹಲಿ, ಮದ್ಯ ಪ್ರದೇಶ, ಹರಿಯಾಣ ನಾಗಲ್ಯಾಂಡ್ ಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ವಿರಳವಾಗಿವೆ. ಅಲ್ಲದೆ ಬೇಸಿಗೆ ಸಮಯದಲ್ಲಿ ಪ್ರವಾಸಗಳು ಹೆಚ್ಚಾಗುತ್ತಿದ್ದವು, ಆದರೆ ಯುದ್ಧದ ಹಿನ್ನೆಲೆ ಬೇರೆ ರಾಜ್ಯಗಳಿಗೆ ತೆರಳದೇ ಖಾಸಗಿ ಬಸ್‌ಗಳು ತಟಸ್ಥವಾಗಿವೆ.



















