ಬೆಂಗಳೂರು: “ಚಿತ್ರಸಂತೆ” ಪ್ರಶಸ್ತಿ ಪ್ರದಾನ ಸಮಾರಂಭ ಮೇ 18ರಂದು ನಡೆಯಲಿದೆ ಎಂದು ಚಿತ್ರಸಂತೆ ಪತ್ರಿಕೆ ಮುಖ್ಯಸ್ಥ ಗಿರೀಶಗೌಡ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ”ಚಿತ್ರಸಂತೆ” ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೆ ಹದಿಮೂರರ ಸಡಗರ. ಚಿತ್ರರಂಗದ ಗಣ್ಯರಿಗೆ ವಿವಿಧ ಆಯಾಮಗಳಲ್ಲಿ ಈ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುವುದು. ಈವರೆಗೂ ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಸ್ಟಾರ್ ಗಳು ನಮ್ಮ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಸ್ವೀಕರಿಸಿ ನಮ್ಮ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಅವರಿಗೆ ನಾನು ಆಬಾರಿ.

ಈ ಬಾರಿಯ ಪ್ರಶಸ್ತಿ ಸಮಾರಂಭ ಮೇ 18 ರಂದು ಹಲಸೂರಿನ Conrad ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. Conrad ಹೋಟೆಲ್ ಅವರು ನಮ್ಮ ಜೊತೆಗಿದ್ದಾರೆ. ಎ.ವಿ.ಆರ್ ಸಂಸ್ಥೆ ಕೂಡ ನಮ್ಮೊಂದಿಗಿದ್ದಾರೆ. ನಟಿ ರಾಗಿಣಿ ಹಾಗೂ ನಟ ರಾಜವರ್ಧನ್ ಅವರು ಸಾಥ್ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ ಎಂದರು.
ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್ “ಚಿತ್ರಸಂತೆ” ಪ್ರಶಸ್ತಿ ಸಮಾರಂಭ ಯಶಸ್ವಿಯಾಗಲಿ ಎಂದು ಹಾರೈಸಿದರು. ನಟ ರಾಜವರ್ಧನ್, ಉತ್ಸವ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.



















