ಬಿಬಿಎಂಪಿ ಎಷ್ಟೇ ಗುಂಡಿ ಮುಚ್ಚುವ ಕೆಲಸ ಮಾಡಿದರೂ ನಗರದಲ್ಲಿ ಮತ್ತೆ ಮತ್ತೆ ರಸ್ತೆ ಗುಂಡಿಗಳು ಬೀಳುತ್ತಿದ್ದು, ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಹೀಗಾಗಿ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಲು ಹೊಸ ಪ್ಲ್ಯಾನ್ ಮಾಡಿದೆ.
ಇಕೋಫಿಕ್ಸ್ ಮೂಲಕ ಕ್ಷಿಪ್ರಗತಿಯಲ್ಲಿ ಗುಂಡಿ ಮುಚ್ಚಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ. ಈ ಹೊಸ ತಂತ್ರಜ್ಞಾನದ ಮೂಲಕ ಗುಂಡಿಗಳನ್ನು ಮುಚ್ಚುವ ವ್ಯವಸ್ಥೆಗೆ ಪಾಲಿಕೆ ಕೈ ಹಾಕಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಕಾರ್ಮಿಕರ ಬಳಕೆಯಿಲ್ಲದೆ ಶೀಘ್ರವಾಗಿ ಗುಂಡಿ ಮುಚ್ಚುವ ಹೊಸ ಯೋಜನೆ ಇದಾಗಿದೆ.
ರಾಮುಖ ಗ್ಲೋಬಲ್ ಎಂಬ ಸಂಸ್ಥೆ ಇಕೋ ಫಿಕ್ಸ್ ಎಂಬ ರೆಡಿಮೇಡ್ ಪದಾರ್ಥವನ್ನು ಪೂರೈಕೆ ಮಾಡಲಿದೆ. ಎಕೋಫಿಕ್ಸ್ 30 ಕೆಜಿ ಹಾಗೂ 50 ಕೆಜಿ ಚೀಲಗಳಲ್ಲಿ ಲಭ್ಯವಿದ್ದು, ಅದನ್ನು ಕಾಮಗಾರಿ ಸ್ಥಳಕ್ಕೆ ಸರಾಗವಾಗಿ ಸಾಗಿಸಬಹುದಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರಾಯೋಗಿಕವಾಗಿ ರಸ್ತೆ ಗುಂಡಿ ಮುಚ್ಚಲು ಬಳಕೆ ಮಾಡಲಾಗಿತ್ತು. ಅದರ ಸಕ್ಸಸ್ ಬೆನ್ನಲ್ಲೇ ಈ ಮಳೆಗೆ ಬೀಳುವ ರಸ್ತೆ ಗುಂಡಿಗೆ ರೆಡಿಮೆಡ್ ಡಾಬರ್ ಹಾಕಿ ಗುಂಡಿ ಮುಚ್ಚಲು ಪಾಲಿಕೆ ಸಜ್ಜಾಗಿದೆ. ಹೀಗಾಗಿ ನಗರ ಇನ್ನಾದರೂ ರಸ್ತೆ ಗುಂಡಿ ಮುಕ್ತ ಆಗಬಹುದೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.