ಮಾಜಿ ಡಿಜಿ ಐಜಿಪಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ವಿರುದ್ಧ ಪತ್ನಿ ಪಲ್ಲವಿ ಗಂಭೀರ ಆರೋಪಗಳನ್ನು ಮಾಡಿರುವ ಮೆಸೇಜ್ ಪೊಲೀಸರಿಗೆ ಲಭ್ಯವಾಗಿವೆ.
ಪತ್ನಿ ಪಲ್ಲವಿ, ಪಿಎಫ್ ಐ ಸಂಘಟನೆ ಜೊತೆ ಓಂ ಪ್ರಕಾಶ್ ಗೆ ಕಾಂಟ್ಯಾಕ್ಟ್ ಇದೆ ಎಂದು ಆರೋಪಿಸಿದ್ದಾರೆ. ಓಂ ಪ್ರಕಾಶ್ ವಿಚಿತ್ರ ಹಾಗೂ ನಿಜವಾಗಿ ಸಾಮ್ರಾಜ್ಯ ದೊಡ್ಡದಾಗಿದೆ. ಓಂ ಪ್ರಕಾಶ್ ವಾಸ್ತವಿಕವಾಗಿ ಪಿಎಫ್ಐ ಸದಸ್ಯ ಎಂದು ಮೆಸೇಜ್ನಲ್ಲಿ ಉಲ್ಲೇಖಿಸಲಾಗಿದೆ. ನನ್ನ ಮಗಳು ಇದನ್ನು ವಿರೋಧಿಸಿದ್ದಳು. ಹೀಗಾಗಿ ನನ್ನ ಮಗಳು ಇಂಜೆಕ್ಷನ್ ಕೊಡುತ್ತಿದ್ದರು. ಇದರಿಂದ ಮಗಳಿಗೆ ಆರೋಗ್ಯದ ಸಮಸ್ಯೆ ಉಂಟಾಗಿದೆ. ನನ್ನ ಮಗಳಿಗೆ ಇಂಜೆಕ್ಷನ್ಗಳನ್ನು ಕೊಟ್ಟಿದ್ದಾರೆ. ಮಗಳು ನೋವಿನಿಂದ ನರಳಿದ್ದಾಳೆ. ನನ್ನ ಮಗಳಿಗೆ ವಿಷ ಕೊಟ್ಟಿದ್ದು, ಇದರಿಂದ ಮೂತ್ರ ಪಿಂಡಗಳಿಗೂ ದೊಡ್ಡ ಹಾನಿ ಉಂಟಾಗಿದೆ ಎಂದು ಮೆಸೆಜ್ ಮಾಡಿರುವುದಾಗಿ ತಿಳಿದು ಬಂದಿದೆ.
ಮೆಸೆಜ್ ಮಾಡಿರುವ ಪಲ್ಲವಿ, ಇದಕ್ಕೆ ನಾನು ಏನು ಮಾಡಬೇಕು ಎಂದು ಮೆಸೇಜ್ನಲ್ಲಿ ಉಲ್ಲೇಖಿಸಿದ್ದಾರೆ. ‘ನನ್ನ ಮಗಳು ಬಳಲುತ್ತಿದ್ದಾಳೆ. ಇದು ರನ್ಯಾ ರಾವ್ ಪ್ರಕರಣಕ್ಕಿಂತ ಹೆಚ್ಚು ಅಪಾಯಕಾರಿ. ಬಲಿಪಶುವಿಗೆ ತುಂಬ ನೋವಿನ ಚುಚ್ಚುಮದ್ದಿನ ಮೂಲಕ ಚುಚ್ಚುಮದ್ದು ನೀಡಬಹುದು. ಅವನು ಉನ್ನತ ಮಟ್ಟದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉನ್ನತ ಮಟ್ಟದ ವ್ಯಕ್ತಿ. ಸದ್ಯ ಪೊಲೀಸರು, ಪಲ್ಲವಿ ಮೊಬೈಲ್ ಪರಿಶೀಲನೆ ನಡೆಸುತ್ತಿದ್ದಾರೆ.