ಯಾದಗಿರಿಯಲ್ಲಿ ಭಾರೀ ಬಿರುಗಾಳಿಗೆ ಹಾರಿ ಬಂದ ಸೂಚನಾ ಫಲಕ ವೃದ್ಧೆಯೊಬ್ಬರಿಗೆ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್ ಗಾಗಿ ಕಾದು ಕುಳಿತಿದ್ದ ವೃದ್ಧೆ ಮೇಲೆ ಏಕಾಏಕಿ ಹಾರಿ ಬಂದು ಸೂಚನಾ ಫಲಕ ಬಿದ್ದಿದೆ. ಗಾಳಿಯಲ್ಲಿ ತೂರಿಬಂದು ಸೂಚನಾ ಫಲಕ ಬಡಿದಿದ್ದರಿಂದಾಗಿ ತೀವ್ರ ರಕ್ತಸ್ರಾವವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ವೃದ್ಧೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಸಕಾಲಕ್ಕೆ ಆಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ವೃದ್ಧೆ ಒದ್ದಾಡಿದ್ದಾರೆ. ಬಳಿಕ ಸಾರಿಗೆ ಬಸ್ ನಲ್ಲಿ ಸಾರಿಗೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾದಗಿರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.