ಬೆಂಗಳೂರು: ಆನೆಗಳ ಹಿಂಡು ಬಿಎಂಟಿಸಿ ಬಸ್ ನ್ನು ಅಡ್ಡಗಟ್ಟಿರುವ ಘಟನೆಯೊಂದು ನಡೆದಿದೆ.
ಬೆಂಗಳೂರು ಹೊರ ವಲಯದ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬೆಳಗಿನ ಜಾವ ಬಸ್ ತೆರಳುತ್ತಿದ್ದಾಗ ದಾಳಿ ಮಾಡಿರುವ ಗಜಪಡೆ ಬಸ್ ಗೆ ಅಡ್ಡ ನಿಂತಿದೆ. ಆನೆಗಳ ಹಿಂಡು ಕಂಡು ಬಿಎಂಟಿಸಿ ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿದ್ದಾರೆ.
ಬಿಎಂಟಿಸಿ ಬಸ್ 214 H ಕೆ.ಆರ್ ಮಾರ್ಕೆಟ್ ಟು ಗುಳ್ಳಹಟ್ಟಿ ಕಾವಲ್ ಬಸ್ ಗೆ ಅಡ್ಡಲಾಗಿ ಈ ಗಜಪಡೆ ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಆನಂತರ ಸ್ಥಳಕ್ಕೆ ಗ್ರಾಮಸ್ಥರು ಆನೆಗಳ ಹಿಂಡನ್ನು ಬನ್ನೆರುಘಟ್ಟ ಅರಣ್ಯಕ್ಕೆ ಓಡಿಸಿದ್ದಾರೆ.



















