ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದ್ರೆ ಸಿನಿಪೇಕ್ಷಕರಿಗೆ ಬಲು ಇಷ್ಟ ಈ ನಟಿ ಬಹುತೇಕ ಬಾರಿ ಸೀರಿಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ.
ನಟಿ ರಚ್ಚು ಮಾತ್ರ ಯಾವುದಾದರೂ ಇವೆಂಟ್ ಗಳಿಗೆ ಹೋಗಬೇಕಾದರೆ ಪ್ರತಿ ಬಾರಿಯೂ ಕೂಡ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಹಾಗೂ ತನ್ನ ನಟನೆಯಲ್ಲಿ ಮಾತ್ರ ರಚ್ಚು ವಸ್ಟೆರ್ನ್ ಡ್ರೆಸ್ ಗಳನ್ನು ಆಯ್ಕೆ ಮಾಡುತ್ತಾರೆ. ಬಹುತೇಕ ಇವರ ಅಭಿಮಾನಿಗಳು ರಚಿತಾ ರಾಮ್ ಯಾಕೆ ಯಾವತ್ತೂ ಸೀರೆಯಲ್ಲಿ ಮಿಂಚುತ್ತಾರೆ. ಸಿರಿಯಲಿ ಕಾಣಿಸಿಕೊಳ್ಳುತ್ತಾರೆ ಅಂತ ಪ್ರಶ್ನೆ ಮಾಡುತ್ತಾರೆ.
ಹೌದು! ಸಾಕಷ್ಟು ರಿಯಾಲಿಟಿ ಶೋಗಳು ಅಥವಾ ಕಾರ್ಯಕ್ರಮಗಳನ್ನು ಫ್ಯಾಮಿಲಿ ಸಮೇತ ಎಲ್ಲರೂ ಕೂಡ ವೀಕ್ಷಣೆ ಮಾಡುವುದರಿಂದ, ನೋಡುಗರಿಗೆ ಯಾವುದೇ ರೀತಿಯಾದಂತಹ ಮುಜುಗರ ತರಿಸಬಾರದು. ಹೀಗಾಗಿ ಸಾರಿಯಲ್ಲಿ ಕಾಣಿಸಿಕೊಳ್ಳಲು ರಚ್ಚು ಇಷ್ಟಪಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಇವರ ಅಭಿಮಾನಿಗಳು ನಮ್ಮನೆ ಹುಡುಗಿ ಅಂತ ಕಮೆಂಟ್ ಮಾಡುತ್ತಾ ಇರುತ್ತಾರೆ. ಇನ್ನು ರಚಿತಾ ರಾಮ್ ಯಾವ ಬಣ್ಣದ ಸಾರಿ ಅಥವಾ ಮೆಟೀರಿಯಲ್ಸ್ ಬಳಸಬೇಕು ಎಂಬುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ರಚಿತಾ ರಾಮ್ ಗೆ ಈಗ 32 ವರ್ಷ. ಭರ್ಜರಿ ಬ್ಯಾಚುಲರ್ ಸೀಸನ್ 2 ವೇದಿಕೆಯ ಮೇಲೆ ಈಗಾಗಲೇ ಜೀವನ ಹಾಗೂ ಮದುವೆ ಬಳಿಕದ ಜೀವನದ ಬಗ್ಗೆ ರಚಿತಾ ರಾಮ್ ಅವರು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ರಚಿತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಸ್ಯಾಂಡಲ್ವುಡ್ ರಚ್ಚುಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಚಂದನವನದ ಟಾಪ್ ನಟಿಯಾಗಿದ್ದಾರೆ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ರಚಿತಾರಾಮ್ 2013 ರಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಕನ್ನಡದ ಅನೇಕ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಬಹುಬೇಡಿಕೆಯ ನಟಿ. ಇವರ ಸೌಂದರ್ಯಕ್ಕೆ ಮನಸೋಲದವರಿಲ್ಲ. ಸೌಂದರ್ಯದಿಂದ ಮಾತ್ರವಲ್ಲ ತಮ್ಮ ನಟನೆಯಿಂದಲೂ ಜನರನ್ನು ಸೆಳೆದವರು ರಚಿತಾ ರಾಮ್. ಸುಮಾರು 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.