ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ವಿರುದ್ಧ ಪಿ. ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಯ್ತು. ಈ ಸರ್ಕಾರ ರೈತ, ದಲಿತ, ಬಡವರ ಪಾಲಿಗೆ, ತೆರಿಗೆ ಪಾವತಿದಾರರ ಪಾಲಿಗೆ ಶಾಪವಾಗಿದೆ. ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಗೆ ಬಾಗಲಕೋಟೆ ಜನತೆಯ ಪರವಾಗಿ ಪ್ರಶ್ನೆ ಕೇಳುತ್ತೇನೆ. ಎರಡು ವರ್ಷದ ಅವಧಿಯಲ್ಲಿ, ಬಾಗಲಕೋಟೆಗೆ ನಿಮ್ಮ ಕೊಡುಗೆ ಏನು? ಖಾಲಿ ಕೊಡ ಬಿಟ್ಟರೆ, ಈ ಸಚಿವರ ಕೊಡುಗೆ ಶೂನ್ಯ. ಎಷ್ಟು ನೀರಾವರಿ ಯೋಜನೆಯನ್ನ ಮಂಜೂರು ಮಾಡಿದ್ದೀರಿ? ಎಂದು ಪ್ರಶ್ನಿಸಿದ ಅವರು, ಈ ಸಚಿವರು ಎರಡು ವರ್ಷದ ಅವಧಿಯಲ್ಲಿ, ವಸತಿ ರಹಿತರಿಗೆ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ದಲಿತ ಸಮುದಾಯದಿಂದ ಬಂದಿರುವ ನೀವು, ಎಷ್ಟು ದಲಿತರಿಗೆ ಗಂಗಾ ಕಲ್ಯಾಣ, ಭೂಮಿ ಒಡೆತನ ಕೊಡಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇವರು ಜನ ಸೇವೆಯಲ್ಲಿ ಬ್ಯೂಸಿಯಾಗಿಲ್ಲ. ಸರಾಯಿ ಮಾರಾಟದಲ್ಲಿ, ಅದರ ಪಾರ್ಟ್ನರ್ ಶಿಪ್ ನಲ್ಲಿ ಮಾತ್ರ ಬ್ಯೂಸಿಯಾಗಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಮೇಲೂ ನನ್ನ ಆದಾಯ ಕಡಿಮೆಯಾಗಬಾರದು. ಅದಕ್ಕೆ ಯಾವ ಮಾರ್ಗ ಹುಡಿಕಿಕೊಳ್ಳಬೇಕು ಎಂಬುವುದರಲ್ಲಿ ಸಚಿವರು ಹಾಗೂ ಅವರ ಕುಟುಂಬ ಬ್ಯೂಸಿಯಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲಿ ಒಂದು ಬಾಟಲ್ ಸಾರಾಯಿ ಕುಡಿದರೆ, ಇವರ ಮೊಬೈಲ್ ಗೆ ಟಕ್ ಅಂತಾ ಹಣ ಬರಬೇಕು. ಆ ರೀತಿಯ ವ್ಯವಸ್ಥೆಯನ್ನು ಸಚಿವರು ಮಾಡಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ನಡೆದಿರುವ ಲಿಕ್ಕರ್ ಹಗರಣಕ್ಕಿಂತಲೂ ದೊಡ್ಡ ಹಗರಣದಲ್ಲಿ ಸಚಿವರು ಹಾಗೂ ಸಚಿವರ ಕುಟುಂಬ ಶಾಮೀಲಾಗಿದೆ. ಅಬಕಾರಿ ಹಗರಣ ಎಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಅಂದ್ರೆ, ಸಚಿವರು ತಮ್ಮ ಚೇಂಬರ್ ನಲ್ಲಿ, ಬೋರ್ಡ್ ಒಂದು ಹಾಕಿಲ್ಲ. ಅದನ್ನು ಬಿಟ್ಟರೆ ಎಲ್ಲರ ಮೈಂಡ್ ನಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ. ಒಬ್ಬ ಜಾಂಯಟ್ ಕಮೀಷನರ್ ಗೆ ಪೋಸ್ಟಿಂಗ್ ಕೊಡಬೇಕು ಅಂದ್ರೆ 3 ಕೋಟಿ ರೂ. ಎಕ್ಸೈಸ್ ಡೆಪ್ಯೂಟಿ ಕಮೀಷ್ ನರ್ ಪೋಸ್ಟಿಂಗ್ ಗೆ 1.5 ಕೋಟಿ ರೂ., ಸಿಎಲ್ 7 ಟ್ರಾನ್ಸಫರ್ ಆಗಬೇಕು ಅಂದ್ರೆ 50 ಲಕ್ಷ ರೂ, ಬಾರ್ ಲೈಸೆನ್ಸ್ ಟ್ರಾನ್ಸಫರ್ ಆಗಬೇಕು ಅಂದ್ರೆ 75 ಲಕ್ಷ ರೂ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶೇರ್ ಹೋಲ್ಡರ್ ಆಗಿ, ಅಕ್ರಮವಾಗಿ ಆ ವೈನ್ ಶಾಪ್ ಗಳಿಗೆ ಮಂಜೂರಾತಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



















