ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಸರ್ಕಾರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಹುದ್ದೆಗಳು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತವಾಗಿವೆ. ಹೆಚ್ಚಿನ ಮಾಹಿತಿಯನ್ನು ವೆಬ್ ವಿಳಾಸ www.hfwcom.karnataka.gov.in ಮತ್ತು nhm.karnataka.gov.in ನಲ್ಲಿ ಲಾಗಿನ್ ಆಗುವ ಮೂಲಕ ಪಡೆಯಬಹುದು. ಡಿಜಿಟಲ್ ಮಾರ್ಕೆಟಿಂಗ್, ಡಿಜಿಟಲ್ ಕಮ್ಯುನಿಕೇಷನ್ಸ್, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಹೆಚ್ಚಿನ ಅವಕಾಶಗಳಿವೆ.
ಯಾವ ಹುದ್ದೆ ಎಷ್ಟು ಖಾಲಿ?
ಡಿಜಿಟಲ್ ಆ್ಯಂಡ್ ಸೋಷಿಯಲ್ ಮೀಡಿಯಾ ಮ್ಯಾನೇಜರ್- 1
ಮೀಡಿಯಾ ಅಸಿಸ್ಟಂಟ್ ಮ್ಯಾನೇಜರ್-1
ಕಂಟೆಂಟ್ ರೈಟರ್- ಕನ್ನಡ ಆ್ಯಂಡ್ ಇಂಗ್ಲಿಷ್-1
ಗ್ರಾಫಿಕ್ ಡಿಸೈನರ್ ಕಮ್ ವೀಡಿಯೋ ಎಡಿಟರ್-1
ಸ್ಟುಡಿಯೋ ಮ್ಯಾನೇಜರ್ ಆ್ಯಂಡ್ ಫೋಟೋ ಕಮ್ ವೀಡಿಯೋಗ್ರಾಫರ್- 1

ಸಂಬಳ ಎಷ್ಟು?
ಡಿಜಿಟಲ್ ಆ್ಯಂಡ್ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆದವರಿಗೆ ಮಾಸಿಕ 1.2 ಲಕ್ಷ ರೂ. ಸಂಬಳ ನೀಡಲಾಗುತ್ತದೆ. ಮೀಡಿಯಾ ಅಸಿಸ್ಟಂಟ್ ಮ್ಯಾನೇಜರ್ 75 ಸಾವಿರ ರೂ., ಕಂಟೆಂಟ್ ರೈಟರ್- ಕನ್ನಡ ಆ್ಯಂಡ್ ಇಂಗ್ಲಿಷ್ 1 ಲಕ್ಷ ರೂ., ಗ್ರಾಫಿಕ್ ಡಿಸೈನರ್ ಕಮ್ ವೀಡಿಯೋ ಎಡಿಟರ್ 75 ಸಾವಿರ ರೂ., ಸ್ಟುಡಿಯೋ ಮ್ಯಾನೇಜರ್ ಆ್ಯಂಡ್ ಫೋಟೋ ಕಮ್ ವೀಡಿಯೋಗ್ರಾಫರ್ ಹುದ್ದೆಗೆ ಆಯ್ಕೆಯಾದವರಿಗೆ 50 ಸಾವಿರ ರೂ. ಸಂಬಳ ನೀಡಲಾಗುತ್ತದೆ. ಗರಿಷ್ಠ ವಯೋಮಿತಿ 45 ವರ್ಷ.
ಸಂದರ್ಶನ ನಡೆಯುವ ಸ್ಥಳ
ಮುಖ್ಯ ಆಡಳಿತಾಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಚೇರಿ, 1ನೇ ಮಹಡಿ, ಪಶ್ಚಿಮ ವಿಭಾಗ, ಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಕ್ರಾಸ್, ಬೆಂಗಳೂರು – 560023. ನಿಗದಿತ ಸಮಯಕ್ಕಿಂತ ನಂತರ ಬಂದ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಲಾಗಿದೆ.



















