ಬಾಲಿವುಡ್ ನ ಮಾದಕ ನಟಿ ಮಲೈಕಾ ಅರೋರ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮ ಬ್ರೇಕಪ್, ರಿಲೇಷನ್ ಶಿಪ್ ಗಳಿಂದಲೇ ಸದಾ ಸುದ್ದಿಯಲ್ಲಿರೋ ಹಾಟ್ ಬೆಡಗಿ ಇದೀಗ ಐಪಿಎಲ್ ಗಳದಲ್ಲಿ ಕಾಣಿಸಿಕೊಂಡು ಕಾವು ಹೆಚ್ಚಿಸಿದ್ದಾರೆ. ಈಗಾಗಲೇ ಅರ್ಜುನ್ ಕಪೂರ್ ತೆಕ್ಕೆಯಿಂದ ಜಾರಿರೋ ಮಲೈಕಾ ಇದೀಗ ಖ್ಯಾತ ಕ್ರಿಕೆಟರ್ ಬಾಹುಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಗಾವಹಟಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪಂದ್ಯ ನೋಡಲು ಮಲೈಕಾ ದೌಡಾಯಿಸಿದರು. ಅಷ್ಟೇ ಅಗಿದ್ದರೆ ಸದ್ದು ಮಾಡುತ್ತಿರಲಿಲ್ಲ. ಆದರೆ, ಈ ಮುನ್ನಿ ಬದನಾಮ್ ಹುಯಿ ಸುಂದರಿ ಈ ಬಾರಿ ಕಾಣಿಸಿಕೊಂಡಿದ್ದು ಮಾತ್ರ ಆ ಖ್ಯಾತನಾಮ ಕ್ರಿಕೆಟರ್ ಜೊತೆ. ಹೌದು, ಆರ್ ಆರ್ ತಂಡದ ನಿರ್ದೇಶಕರಾಗಿರೋ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಜೊತೆ ಮಲೈಕಾ ಪ್ರತ್ಯಕ್ಷರಾಗಿದ್ದಾರೆ.
ಈ ಮೂಲಕ ಸಂಗಕ್ಕಾರ ಜೊತೆ ಲವ್ವಲ್ಲಿ ಬಿದ್ರಾ ಮಲೈಕಾ ಅನ್ನೋ ಹಾಟ್ ಹಾಟ್ ಗಾಸಿಪ್ ಇದೀಗ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಆದರೆ, ಮಲೈಕಾ ಮಾತ್ರ ತಾವೀಗ ಹೊಸ ರಿಲೇಷನ್ ಶಿಪ್ ಗಿನ್ನೂ ಸಿದ್ಧರಿಲ್ಲ ಅಂದಿದ್ದಾರೆ. ಆದ್ರೆ ಕುಮಾರ ಸಂಗಕ್ಕಾರ ಜೊತೆ ಮಲೈಕಾ ಹೊಸ ಇನ್ನಿಂಗ್ ಶುರುವಾಗುದೆ ಅನ್ನೋ ಸುದ್ದಿ ರಾಜಸ್ಥಾನ ರಾಯಲ್ಸ್ ಅಂಗಳದಿಂದಲೇ ಹೊರ ಬರ್ತಿದೆ.