ಬೆಂಗಳೂರು: ಮಲಯಾಳಂ ಸಿನಿಮಾಗಾಗಿ ಬೆಂಗಳೂರಿನಲ್ಲಿ ಕಾಲೇಜಿಗೆ ರಜೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಮಲಯಾಳಂ ಸಿನಿಮಾ ನೋಡಿ ಎಂದು ಇಡೀ ಕಾಲೇಜಿಗೆ ರಜೆ ಘೋಷಿಸಿದೆ. ಕನ್ನಡ ನೆಲದಲ್ಲಿ ಪರಭಾಷೆ ಸಿನಿಮಾ ಪ್ರೋತ್ಸಾಹಿಸಿದ ಕಾಲೇಜಿನ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮೋಹನ್ ಲಾಲ್ ಸಿನಿಮಾ ನೋಡುವುದಕ್ಕಾಗಿ ಇಡೀ ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಂಬುರನ್ ಸಿನಿಮಾಗಾಗಿ ಅಧಿಕೃತವಾಗಿ ಮ್ಯಾನೇಜ್ಮೆಂಟ್ ರಜೆ ಘೋಷಿಸಿದೆ. ಈ ಮೂಲಕ ಮಲಯಾಳಂ ಸಿನಿಮಾ ನೋಡಲು ಪ್ರೋತ್ಸಾಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜರಾಜೇಶ್ವರಿ ನಗರದ ಗುಡ್ ಶೆಪರ್ಡ್ ಕಾಲೇಜು ರಜೆ ಘೋಷಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ಮಾರ್ಚ್ 27 ರಂದು ಎಂಪುರನ್ ಸಿನಿಮಾ ರಿಲೀಸ್ ಆಗಲಿದ್ದು, ಈ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ. ಸಿನಿಮಾ ನೋಡಿ ಎಂಜಾಯ್ ಮಾಡಿ, ರಜೆ ತಗೊಳ್ಳಿ ಎಂದು ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ ಎನ್ನಲಾಗಿದೆ.