ಬೆಳಗಾವಿ: ಮರಾಠಿಯಲ್ಲಿ ಮಾತನಾಡುವಂತೆ ಪಿಡಿಒಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕಿಣೆ (Kine) ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಕಿಣೆ ಗ್ರಾಮದ ತಿಪ್ಪಣ್ಣ ಡೋಕ್ರೆ ಎಂಬ ಆರೋಪಿ ಪಂಚಾಯಿತಿಗೆ ನುಗ್ಗಿ ಪಿಡಿಓಗೆ ಮರಾಠಿಯಲ್ಲಿ ಮಾತನಾಡುವಂತೆ ಧಮ್ಕಿ ಹಾಕಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಕಿಣೆ ಗ್ರಾಮ ಪಂಚಾಯತಿ ಪಿಡಿಓ ನಾಗೇಂದ್ರ ಪತ್ತಾರ್ ಅವರಿಗೆ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ತಿಪ್ಪಣ್ಣ ಆವಾಜ್ ಹಾಕಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಆರೋಪಿ ತಿಪ್ಪಣ್ಣ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.