ಕಲಬುರಗಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಚಾಲಕರಿಗೆ ಮಸಿ ಬಳಿದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಬಸ್ ಚಾಲಕನಿಗೆ ಕರ್ನಾಟಕದಲ್ಲಿ ಹಾರ ಹಾಕಿ ಸನ್ಮಾನ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಆಳಂದಗೆ ಬಂದಿಗದ್ದ ಬಸ್ ಚಾಲಕನಿಗೆ ಹಾರ ಹಾಕಿ ಸನ್ಮಾನ ಮಾಡಲಾಗಿದೆ. ಮಸಿ ಬಳಿಯುವುದು ಮಾನವೀಯತೆ ಅಲ್ಲ. ನೀವು ಮಸಿ ಬಳಿದರೆ ನಾವು ಹಾರ ಹಾಕುತ್ತೇವೆ ಎಂದಿರುವ ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಬಸ್ ಚಾಲಕರು ಹಾಗೂ ನಿರ್ವಾಹಕರನ್ನು ಮಾನವೀಯತೆಯಿಂದ ಕಾಣುವಂತೆ ಕರೆ ನೀಡಿದ್ದಾರೆ.
ಅಲ್ಲದೇ, ಇದೇ ವೇಳೆ ಕರ್ನಾಟಕವನ್ನು ಪದೇ ಪದೇ ಕೆಣಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದವರನ್ನು ಕೆಣಕಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.