ಬೆಂಗಳೂರು: “ಭಗವಂತನ ಹತ್ತಿರ ಲೆಕ್ಕ ಇರುತ್ತದೆ ಶಿವಕುಮಾರ್” ಎಂದು ಮುನಿರತ್ನ ಕೆಣಕಿದ್ದಾರೆ.
ಈ ಕುರಿತ ವಿಡಿಯೋ ಬಿಡುಗಡೆ ಮಾಡಿರುವ ಅವರು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಶ್ರೀಗಂಧಕಾವಲು ಸಜ್ಜೇಪಾಳ್ಯ, ಸುಮನಹಳ್ಳಿ ಜಂಕ್ಷನ್ ಹತ್ತಿರ ಇಲ್ಲೊಂದು ಸ್ಥಳವಿದೆ.
ರಂಗಮ್ಮ ಮತ್ತು ಕೃಷ್ಣಪ್ಪ ಸ್ವಯಾರ್ಜಿತವಾಗಿ ಸಂಪಾದಿಸಿದ್ದ ನೆಲವಿದೆ. 1901-02 ರಲ್ಲಿ ಖರೀದಿ ಮಾಡಿದ 45 ಎಕರೆ ಜಮೀನು ಇದೆ. ಇದಾದ ಬಳಿಕ 10-11 ವರ್ಷದಲ್ಲೇ ಕೃಷ್ಣಪ್ಪ ನಿಧನ ಹೊಂದುತ್ತಾರೆ. ಆ ದಂಪತಿಗಳಿಗೆ ಮಕ್ಕಳಿರಲ್ಲ. ಕೃಷ್ಣಪ್ಪ ನಿಧನ ಹೊಂದಿದ ಕಾರಣ, ರಂಗಮ್ಮನವರು ವಿಲ್ ಬರೆಸುತ್ತಾರೆ.
ಇದು ನಮ್ಮ ಒಕ್ಕಲಿಗ ಸಮಾಜದ ಏಳಿಗೆಗೆ ಉಪಯೋಗ ಮಾಡಿಕೊಳ್ಳಬೇಕು ಎಂದು ವಿಲ್ ಮಾಡುತ್ತಾರೆ. ಬಳಿಕ ಒಂದು ಟ್ರಸ್ಟ್ ಮಾಡಿಕೊಳ್ಳುತ್ತಾರೆ. ನಾಲ್ಕು ಮಂದಿ ಕುಟುಂಬಸ್ಥರು ಟ್ರಸ್ಟ್ ಮಾಡಿಕೊಳ್ಳುತ್ತಾರೆ. ಆ ಟ್ರಸ್ಟ್ ನಲ್ಲಿ 12 ಮಂದಿ ಸದಸ್ಯರು ಇರುತ್ತಾರೆ. ಈ ಟ್ರಸ್ಟ್ ನ ಮೂಲಕ 45 ಎಕರೆ ಜಾಗವನ್ನು ಅಭಿವೃದ್ಧಿ ಮಾಡುವ ಕೆಲಸ ಆಗುತ್ತದೆ “ಭಗವಂತನ ಹತ್ತಿರ ಲೆಕ್ಕ ಇರುತ್ತದೆ ಶಿವಕುಮಾರ್”. “ದೇವರ ಮೆಚ್ಚುವ ಕೆಲಸ ಮಾಡಿ” ಎಂದು ಡಿ.ಕೆ.ಶಿವಕುಮಾರ್ ಗೆ ಕಿವಿಮಾತು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್‌ಗೆ ಅವರದ್ದೇ ಸಮುದಾಯ ಜಮೀನು ಉಳಿಸಿಕೊಡಿ ಎಂದು ತಿಳಿಸಿ, ಒಳ್ಳೆಯ ಕೆಲಸ ಮಾಡಿ ಎಂದು ಮುನಿರತ್ನ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಡಿ.ಕೆ.ಶಿವಕುಮಾರ್‌ಗೆ ಭಗವಂತನ ಲೆಕ್ಕ ಮುನಿರತ್ನ ನೆನಪಿದ್ದೇಕೆ? “ಕರ್ನಾಟಕ ನ್ಯೂಸ್‌ಬೀಟ್” ನಲ್ಲಿ ಮುನಿರತ್ನರ Exclusive ವಿಡಿಯೋ ಸಿಕ್ಕಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಜಮೀನು ವಿಚಾರಕ್ಕೆ ಭಗವಂತನ ಹೆಸರು ಪ್ರಸ್ತಾಪಿಸಿ, ಈ ಕೆಲಸಕ್ಕೆ ಕೈ ಜೋಡಿಸಿ ಎಂದು ಡಿಕೆಶಿಗೆ ಆಹ್ವಾನ ನೀಡಿದ್ದಾರೆ.
ಇತ್ತೀಚೆಗೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಪ್ರವೇಶ ಆಗುತ್ತದೆ. ಅದರಲ್ಲಿ ಒಬ್ಬರು ಮರಿಯಪ್ಪನಪಾಳ್ಯ ಶಿವು ಹಾಗೂ ಇಬ್ಬರು ವಿಧಾನಪರಿಷತ್ ಸದಸ್ಯರು ಎಂದು ಆರೋಪಿಸಿದ್ದಾರೆ. ಇದರ ಜೊತೆಯಲ್ಲಿ ನಮ್ಮ ಬೆಂಗಳೂರು ಉಸ್ತುವಾರಿ ಸಚಿವರು, ಉಪ- ಮುಖ್ಯಮಂತ್ರಿಗಳು, ಇವರ ಆಪ್ತರು, ಅತ್ಯಾಪ್ತರು, ಇವರ ಕೆಲ ಸ್ವತ್ತುಗಳಿಗೆ ಪಾಲುದಾರಿಕೆಗೆ ಶೋಭಾ ಡೆವಲಪರ್ಸ್ ಇದ್ದಾರೆ. ಈ 45 ಎಕರೆ ಕಬಳಿಸಲು ಎಲ್ಲಾ ಸಂಚುಗಳು ನಡೆದಿವೆ. ಇದು ಬೆಂಗಳೂರು ನಗರ ಅಂತಾ ಅಲ್ಲ. ಇಡೀ ರಾಜ್ಯದ ಒಕ್ಕಲಿಗರು ಇದನ್ನು ಖಂಡಿಸಬೇಕು. ಕಾರಣ, ಆ ಕುಟುಂಬದ ಸದಸ್ಯರು ಒಕ್ಕಲಿಗ ಸಮುದಾಯದ ಮಕ್ಕಳ ಏಳಿಗೆಗೆ ದಾನ ಮಾಡಿರುವ ಸ್ಥಳ. ಇದನ್ನು ಉಳಿಸಬೇಕು.
ಡಿ.ಕೆ.ಶಿವಕುಮಾರ್ ಅವರಲ್ಲಿ ನಾನು ಮನವಿ ಮಾಡುತ್ತೇನೆ. ಯಾವುದೋ ಪೂರ್ವಜನ್ಮದ ಪುಣ್ಯ, ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿದ್ದೀರಿ. ಬೆಂಗಳೂರಿನ 45 ಎಕರೆ ಪ್ರದೇಶವನ್ನು ಉಳಿಸಿಕೊಡಿ. ಇದನ್ನು ಉಳಿಸಿಕೊಟ್ಟರೆ ಭಗವಂತನ ಹತ್ತಿರ ಲೆಕ್ಕ ಇರುತ್ತದೆ. ಭೂಗಳ್ಳರ ಜೊತೆಗೆ ಸೇರಿ ನಾವು ಇದನ್ನು ಕಬಳಿಸಿದರೆ ಭಗವಂತನ ಹತ್ತಿರ ಇರುವ ಲೆಕ್ಕವನ್ನು ಅಳಿಸುವುದಕ್ಕೆ ಆಗಲ್ಲ. ನಿಮ್ಮ ಹೆಸರು ಶಾಶ್ವತವಾಗಿರುತ್ತದೆ. ಈ ಭೂಮಿಯನ್ನು ಉಳಿಸಿಕೊಡಿ. ನಿಮಗೆ ಇಂದು ಆ ಶಕ್ತಿ ಇದೆ. ಇದನ್ನು ನಾವು ಮಾಡದೇ ಹೋದ್ರೆ, ಭಗವಂತ ಕ್ಷಮಿಸುವುದಿಲ್ಲ. ನಾನು ಈ ಕ್ಷೇತ್ರದ ಶಾಸಕನಾಗಿ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ನನ್ನ ಕೊನೆಯುಸಿರು ಇರುವವರೆಗೂ ನಾನು ಈ ಭೂಮಿಯನ್ನು ರಕ್ಷಣೆ ಮಾಡುತ್ತೇನೆ. ಯಾರೇ ಬಂದರೂ ನಾನು ಹೋರಾಟ ಮಾಡಿಯೇ ತೀರುತ್ತೇನೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.